ಶ್ರೀಹರಿಕೋಟ: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಭಾನುವಾರ ಮಧ್ಯರಾತ್ರಿ 12.07 ಕ್ಕೆ ತನ್ನ ಅತ್ಯಂತ ಭಾರವಾದ ರಾಕೆಟ್ (Rocket) ಬಳಸಿ 36 ಉಪಗ್ರಹಗಳನ್ನು (Satellites) ಉಡಾವಣೆ ಮಾಡಿದೆ.
LVM3 ರಾಕೆಟ್ ಅನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 2ನೇ ಉಡಾವಣಾ ಕೇಂದ್ರದಿಂದ ಹಾರಾಟ ನಡೆಸಲಾಗಿದೆ.
Advertisement
ISRO launches 36 satellites of OneWeb onboard #LVM3.
The LVM3-M2 mission is a dedicated commercial mission for a foreign customer OneWeb, through NSIL
????First Indian rocket with 6 ton payload. pic.twitter.com/1Cj0vmAMAn
— All India Radio News (@airnewsalerts) October 22, 2022
Advertisement
ಇಸ್ರೋ ಅತ್ಯಂತ ಭಾರವಾದ ರಾಕೆಟ್ LVM3 ಅನ್ನು ವಾಣಿಜ್ಯದ ಉದ್ದೇಶಕ್ಕೆ ಉಡಾವಣೆ ಮಾಡಿದ್ದು, ಇದರಲ್ಲಿ ಸಾಗಿಸಲಾದ ಉಪಗ್ರಹಗಳು ಲಂಡನ್ ಮೂಲದ ಸಂವಹನ ಸಂಸ್ಥೆ ಒನ್‌ವೆಬ್ ಗೆ (OneWeb) ಸೇರಿವೆ. ಇದರಲ್ಲಿ ಭಾರತದ ಭಾರ್ತಿ ಎಂಟರ್‌ಪ್ರೈಸಸ್ (Bharti Enterprises) ಪ್ರಮುಖ ಹೂಡಿಕೆದಾರರಾಗಿದ್ದಾರೆ.
Advertisement
ಒಟ್ಟು 5,896 ಕೆಜಿಯ 36 ಉಪಗ್ರಹಗಳನ್ನು ರಾಕೆಟ್ ಹೊತ್ತೊಯ್ದಿದೆ. LVM3 ರಾಕೆಟ್ 8 ಸಾವಿರ ಕೆಜಿ ವರೆಗಿನ ಉಪಗ್ರಹಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: ದೀಪಾವಳಿ ಹಬ್ಬದಂದೇ ಸೂರ್ಯಗ್ರಹಣ- ಬೆಂಗಳೂರಿನ ದೇಗುಲಗಳು ಬಂದ್
Advertisement
ಇದು ವಾಣಿಜ್ಯ ಉದ್ದೇಶದಿಂದ ಇಸ್ರೋ ಉಡಾಯಿಸಿದ ಮೊದಲ ರಾಕೆಟ್ ಆಗಿದೆ. ಒನ್‌ವೆಬ್‌ನ ಇನ್ನೂ 36 ಉಪಗ್ರಹಗಳನ್ನು 2023ರಲ್ಲಿ ಎಲ್‌ವಿಎಂ ರಾಕೆಟ್‌ನಿಂದ ಉಡಾಯಿಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ, ವಿಜ್ಞಾನಿ ಸೋಮನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಮೋದಿ ದೀಪಾವಳಿ- ರಾಮ ಮಂದಿರ ಕಾಮಗಾರಿ ಪರಿಶೀಲನೆ