ರಾಯಚೂರು: ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಹಿನ್ನೆಲೆ ಕೊಲೆಯಾದ ಹರ್ಷ ಕುಟುಂಬಕ್ಕೆ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಧನ ಸಹಾಯ ಮಾಡಿದ್ದಾರೆ.
ಭಜರಂಗದಳದ ಮೃತ ಹರ್ಷ ಕುಟುಂಬಕ್ಕೆ ರಾಯರ ಪ್ರಸಾದ ರೂಪವಾಗಿ 50 ಸಾವಿರ ರೂಪಾಯಿಗಳನ್ನು ಶ್ರೀಗಳು ನೀಡಿದ್ದಾರೆ. ಸದ್ಯ ಆ ಹಣವನ್ನು ಹರ್ಷ ಕುಟುಂಬಸ್ಥರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಂತ್ರಾಲಯ ಮಠದ ಆಡಳಿತ ಮಂಡಳಿ ತಿಳಿಸಿದೆ. ಇದನ್ನೂ ಓದಿ: ಹತ್ಯೆಯಾಗಿರುವ ಹರ್ಷ ಕುಟುಂಬಸ್ಥರಿಗೆ 10ಕ್ಕೂ ಹೆಚ್ಚು ಸ್ವಾಮೀಜಿಗಳಿಂದ ಸಾಂತ್ವನ
ಕೆಲ ದಿನಗಳ ಹಿಂದೆ ಶಿವಮೊಗ್ಗದಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತ ಹರ್ಷ ಹತ್ಯೆ ನಡೆದಿತ್ತು. ಈಗಾಗಲೇ ಹತ್ಯೆ ಸಂಬಂಧ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಗಲಭೆ ಬಳಿಕ ಶಿವಮೊಗ್ಗದಲ್ಲಿ ಇಂದಿನಿಂದ ಶಾಲಾ-ಕಾಲೇಜು ಆರಂಭ