Latest

ಮೋದಿ ಬಗ್ಗೆ ಸ್ವಾಮಿ ವ್ಯಂಗ್ಯ – ಕುದುರೆಗೆ ನೀರು ಕುಡಿಯುವಂತೆ ಮಾಡೋದು ಹೇಗೆ?

Published

on

Share this

ನವದೆಹಲಿ: ಸ್ವಪಕ್ಷದ ಬಗ್ಗೆಯೇ ಆಗಾಗ ಚಾಟಿ ಬೀಸುತ್ತಾ ಕೆಲವು ಸಲಹೆಗಳನ್ನು ನೀಡುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಇದೀಗ ಪ್ರಧಾನಿ ಮೋದಿ ಅವರಿಗೆ ವ್ಯಂಗ್ಯವಾಡಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ಕೆಲವು ದಿನಗಳಿಂದ ನನಗೆ ಅಂಗಡಿಗಳನ್ನು ಇಟ್ಟುಕೊಂಡಿರುವವರು ಫೋನ್ ಮಾಡಿ ಸದ್ಯ ನಿರ್ಮಾಣವಾಗಿರೋ ಆರ್ಥಿಕ ಪರಿಸ್ಥಿತಿಯಿಂದ ಪರಿಹಾರ ಪಡೆಯಲು ಮೋದಿಗೆ ಕೆಲವು ಸೂಚನೆ ನೀಡಿ ಎಂದು ಹೇಳುತ್ತಾರೆ. ಅವರಿಗೆ ನಾನು ಕುದುರೆಯನ್ನ ನೀರಿರುವಲ್ಲಿಗೆ ಕರೆದೊಯ್ಯಬಹುದು. ಆದರೆ ನೀರು ಕುಡಿಯುವುದು ಹೇಗೆ? ಎಂದು ಹೇಳಿದ್ದೇನೆ. ನಾನು ಮೋದಿಗೆ 12 ಪತ್ರಗಳನ್ನು ಬರೆದಿದ್ದೇನೆ. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ನಿನ್ನೆ ಸುಬ್ರಮಣಿಯನ್ ಸ್ವಾಮಿ ಒಬ್ಬ ಫ್ರಿಲಾನ್ಸ್ ಪೊಲಿಟಿಶಿಯನ್(ಸ್ವತಂತ್ರ ರಾಜಕಾರಣಿ) ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆಗೆ ಸುಬ್ರಮಣಿಯನ್ ಸ್ವಾಮಿಯವರು ಖಾರವಾಗಿ ತಿರುಗೇಟು ನೀಡಿದ್ದರು. ಇದನ್ನೂ ಓದಿ:  ದಳ ತೊರೆದು ಕೈ ಹಿಡಿಯಲು ನಿರ್ಧರಿಸಿದ ಕೋಲಾರ ಶಾಸಕ ಶ್ರೀನಿವಾಸಗೌಡ

ಬೊಮ್ಮಾಯಿ ಹೇಳಿದ್ದೇನು?
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಸೆಪ್ಟೆಂಬರ್ 15ರಂದು ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಬ್ರಮಣಿಯನ್ ಸ್ವಾಮಿಯವರ ಟ್ವೀಟ್ ಕುರಿತು ಉಲ್ಲೇಖಿಸಿ ಮಾತನಾಡುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ್ದ ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ, ಸುಬ್ರಮಣಿಯನ್ ಸ್ವಾಮಿಯವರ ಬಗ್ಗೆ ನಿಮಗೆ ಗೊತ್ತಿದೆ. ಅವರು ಯಾವುದೇ ಪಕ್ಷದಲ್ಲಿರಲಿ ಸ್ವತಂತ್ರ ರಾಜಕಾರಣಿ ಇದ್ದಂಗೆ. ಅವರಿಗೆ ಏನು ಮನಸ್ಸಿಗೆ ಬರುತ್ತದೋ ಅದನ್ನು ಹೇಳುತ್ತಾರೆ. ಅವರೊಬ್ಬರ ಸ್ವತಂತ್ರ ರಾಜಕಾರಣಿಯಾಗಿ ಅವರದ್ದೇಯಾದ ವಿಶ್ಲೇಷಣೆಯಲ್ಲಿ ಹೇಳುತ್ತಿರುತ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ನಾನು ಯಾರ ಬೂಟೂ ನೆಕ್ಕಿಲ್ಲ – ಬೊಮ್ಮಾಯಿಗೆ ಸುಬ್ರಮಣಿಯನ್ ಸ್ವಾಮಿ ತಿರುಗೇಟು

ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸುಬ್ರಮಣಿಯನ್ ಸ್ವಾಮಿ ಒಬ್ಬ ಸ್ವತಂತ್ರ ರಾಜಕಾರಣಿ ಎಂದು ಹೇಳಿದ್ದಾರೆ. ನಾನು 6 ಬಾರಿ ಸಂಸದನಾಗಿದ್ದೇನೆ. ಎರಡು ಬಾರಿ ಸಚಿವನಾಗಿದ್ದೇನೆ. ಆದರೆ ಯಾರ ಬೂಟನ್ನು ನೆಕ್ಕಿಲ್ಲ. ಪ್ರಜಾಪ್ರಭುತ್ವಕ್ಕೆ ಸತ್ಯ ಹೇಳುವುದು ಅನಿವಾರ್ಯ ಎಂದು ಹೇಳಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತಿರುಗೇಟು ನೀಡಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement