Connect with us

Latest

ಅಶೋಕ್ ಸಿಂಘಾಲ್‍ಗೆ ‘ಭಾರತ ರತ್ನ’ ನೀಡಿ: ಸುಬ್ರಮಣಿಯನ್ ಸ್ವಾಮಿ

Published

on

ನವದೆಹಲಿ: ಅಯೋಧ್ಯೆ ತೀರ್ಪಿನ ಕುರಿತು ಸಂತಸ ವ್ಯಕ್ತಪಡಿಸಿರುವ ರಾಜ್ಯಸಭಾ ಎಂಪಿ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಮಾಜಿ ವಿಎಚ್‍ಪಿ ನಾಯಕ ಅಶೋಕ್ ಸಿಂಘಾಲ್ ಅವರಿಗೆ ಭಾರತ ರತ್ನ ನೀಡಿ ಎಂದು ಹೇಳಿದ್ದಾರೆ.

ಈ ಕುರಿತು ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರವು ಸುಬ್ರಮಣಿಯನ್ ಸ್ವಾಮಿ ಅವರು, ಈ ಸಮಯದಲ್ಲಿ ಶ್ರೀ ಅಶೋಕ್ ಸಿಂಘಾಲ್ ಅವರನ್ನ ನೆನಪಿಸಿಕೊಳ್ಳಬೇಕಿದೆ. ನಮೋ ಸರ್ಕಾರ ಕೂಡಲೇ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.

1992 ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಶೋಕ್ ಸಿಂಘಾಲ್ ಆರೋಪಿಯಾಗಿದ್ದರು. ಅಡ್ವಾನಿ ಅವರ ಹೆಸರಿನೊಂದಿಗೆ ಸಿಂಘಾಲ್, ಮುರಳಿ ಮನೋಹರ್ ಜೋಷಿ, ವಿಷ್ಣು ಹರಿ, ಉಮಾ ಭಾರತಿ, ಗಿರಿರಾಜ್ ಕಿಶೋರ್ ಸೇರಿದಂತೆ ಪ್ರಮುಖರ ಮೇಲೆ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಸರ್ವೋಚ್ಚ, ಆದ್ರೆ ದೋಷಾತೀತ: ಓವೈಸಿ

ಸದ್ಯ ಅಯೋಧ್ಯೆ ತೀರ್ಪು ಪ್ರಕಟವಾಗಿದ್ದು, ರಾಮ ಜನ್ಮ ಭೂಮಿಯಲ್ಲೇ ಮಂದಿರ ನಿರ್ಮಾಣಕ್ಕೆ ಅವಕಾಶ ಲಭಿಸಿದೆ. ಈ ಹಿನ್ನೆಲೆಯಲ್ಲಿ ರಾಮಮಂದಿರಕ್ಕಾಗಿ ಹೋರಾಟ ನಡೆಸಿದ್ದ ಅಶೋಕ್ ಸಿಂಘಾಲ್ ಅವರಿಗೆ ಭಾರತ ರತ್ನ ನೀಡಿ ಎಂದು ಸ್ವಾಮಿ ಆಗ್ರಹಿಸಿದ್ದಾರೆ.

ಅಂದಹಾಗೇ 2015 ರಲ್ಲಿ ಸಿಂಘಾಲ್ ಅವರು ಮೃತಪಟ್ಟಿದ್ದು, ರಾಮಮಂದಿರ ನಿರ್ಮಾಣಕ್ಕಾಗಿ ಸತತ ಹೋರಾಟ ನಡೆಸಿದ್ದರು. 1984ರಲ್ಲೇ ವಿಎಚ್‍ಪಿ ವತಿಯಿಂದ ಮೊದಲ ಧರ್ಮ ಸಂಸತ್ ಆಯೋಜಿಸಿ ರಾಮಮಂದಿರ ನಿರ್ಮಾಣಕ್ಕೆ ಪ್ರಾಮುಖ್ಯತೆ ತಂದಿದ್ದರು. ಅದರಲ್ಲೂ ಮೊದಲ ಬಾರಿಗೆ 5 ವರ್ಷಗಳ ಕಾಲ ಆಡಳಿತ ನಡೆಸಿದ ವಾಜಪೇಯಿ ಸರ್ಕಾರ ಅವಧಿಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಒತ್ತಡ ಹೇರಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇದನ್ನೂ ಓದಿ: ಶಿಯಾ ಮತ್ತು ನಿರ್ಮೋಹಿ ಅಖಾಡ ಸಲ್ಲಿಸಿದ್ದ ಅರ್ಜಿ ವಜಾ – ಸುಪ್ರೀಂ ಆದೇಶದಲ್ಲಿ ಏನಿದೆ?

Click to comment

Leave a Reply

Your email address will not be published. Required fields are marked *