ಮಂಡ್ಯ: ಬ್ರಾಹ್ಮಣರನ್ನು ಉದ್ದೇಶ ಪೂರ್ವಕವಾಗಿ ತುಳಿಯುವ ಕೆಲಸ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಬ್ರಾಹ್ಮಣ ಸಭಾದ ಮುಖಂಡ ಸುಬ್ಬರಾಯ ಹೆಗ್ಗಡೆ (Subbaraya Heggade) ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ನಡೆದ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸುಬ್ಬರಾಯ ಹೆಗ್ಗಡೆ, ಬ್ರಾಹ್ಮಣ (Brahmin) ರನ್ನು ಉದ್ದೇಶ ಪೂರ್ವಕವಾಗಿ ತುಳಿಯುವ ಕೆಲಸ ನಡೆಯುತ್ತಿದೆ. ಅದೇ ಕಾರಣಕ್ಕೆ ಒಬ್ಬ ರಾಜಕೀಯ ಮಹಾನ್ ನಾಯಕ ಗಾಂಧಿನ ಕೊಂದ ವಂಶಸ್ಥರು ಎಂದು ಹೇಳಿದ್ದಾರೆ. ನಮ್ಮನ್ನು ತುಳಿಯಲು ಎರಡು ಉದ್ದೇಶಗಳಿವೆ ಬ್ರಾಹ್ಮಣರನ್ನು ತುಳಿದರೆ ಹಿಂದುತ್ವವನ್ನು ತುಳಿಯಬಹುದು. ಬ್ರಾಹ್ಮಣರು ಹಿಂದುತ್ವದ ಆತ್ಮ, ಬ್ರಾಹ್ಮಣರು ಇಲ್ಲದಿದ್ದರೆ ಹಿಂದುತ್ವ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ಬ್ರಾಹ್ಮಣರನ್ನು ಹತ್ತಿಕ್ಕಿದ್ದರೆ ಹಿಂದುತ್ವವನ್ನು ಹತ್ತಿಕ್ಕಬಹುದು ಎಂದುಕೊಂಡಿದ್ದಾರೆ ಎಂದು ಹೇಳಿದರು.
Advertisement
Advertisement
ಈಗಾಗಲೇ ನಮ್ಮನ್ನು ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹತ್ತಿಕ್ಕಿದ್ದಾರೆ. ನಮ್ಮ ಬಳಿ ಈಗ ಉಳಿದುಕೊಂಡಿರುವುದು ಬುದ್ಧಿವಂತಿಕೆ ಮಾತ್ರ. ಇದೀಗ ಬುದ್ಧಿವಂತಿಕೆ ಹತ್ತಿಕ್ಕಲು ಪ್ರಯತ್ನ ಮಾಡುತ್ತಿದ್ದಾರೆ. ಬ್ರಾಹ್ಮಣರನ್ನು ಇಟ್ಟುಕೊಂಡು ಇದೀಗ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ರೌಡಿಶೀಟರ್‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಜೆಡಿಎಸ್ ಶಾಸಕ
Advertisement
Advertisement
ಆರ್‍ಎಸ್‍ಎಸ್‍ನವರು ಬ್ರಾಹ್ಮಣರನ್ನು ಪ್ರಹ್ಲಾದ್ ಜೋಶಿ (Pralhad Joshi) ಅವರನ್ನು ಸಿಎಂ ಮಾಡುತ್ತಾರೆ ಎಂದು ಹೇಳಿದ್ದರೆ ಒಕ್ಕಲಿಗರು, ಲಿಂಗಾಯಿತರು ಬಿಜೆಪಿಗೆ ಮತ ನೀಡಲ್ಲ ಎಂದು ಹೀಗೆ ಹೇಳಿದ್ದಾರೆ. ಈ ಹೇಳಿಕೆಯ ಹಿಂದೆ ಈ ರೀತಿಯ ಹುನ್ನಾರವಿದೆ ನಮ್ಮನ್ನು ತುಳಿಯುವುದು ಒಂದು ಅಜೆಂಡಾ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಮತ್ತೊಂದು ಅಜೆಂಡಾ ಆಗಿದೆ. ಇದನ್ನು ತಡೆಯಲು ನಾವೆಲ್ಲರೂ ಒಗ್ಗಟ್ಟು ಆಗಬೇಕು ಎಂದು ಅವರು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k