CrimeLatestNational

ರೇಪ್ ಕೇಸ್ ಹಿಂಪಡೆಯಲು ಬಂದಿದ್ದ ಯುವತಿಯ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಅತ್ಯಾಚಾರ!

ಮುಂಬೈ: ರೇಪ್ ಕೇಸ್ ಹಿಂಪಡೆಯಲು ಬಂದಿದ್ದ ಯುವತಿಯ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ರೋಹನ್ ಗೊಂಜಾರಿ ಅತ್ಯಾಚಾರ ಎಸಗಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ 506 (ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಆರಂಭವಾಗಿದ್ದು, ಆರೋಪಿ ರೋಹನ್ ಗೊಂಜಾರಿನನ್ನು ಬಂಧಿಸಿಲ್ಲ ಎಂದು ವರದಿಯಾಗಿದೆ.

ಏನಿದು ಪ್ರಕರಣ?:
ತನ್ನ ಸ್ನೇಹಿತ ಅತ್ಯಾಚಾರ ಎಸಗಿದ್ದಾನೆ ಅಂತಾ 23 ವರ್ಷದ ಯುವತಿ ಮುಂಬೈನ ಮಾಕುರ್ದ್ ಠಾಣೆಗೆ ದೂರು ನೀಡಿದ್ದಳು. ಈ ಕುರಿತು ತನಿಖೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಅಷ್ಟೇ ಅಲ್ಲದೇ ಪ್ರಕರಣವನ್ನು ಭಿವಾಂಡಿಯ ಶಾಂತಿನಗರ್ ಠಾಣೆಗೆ ವರ್ಗಾಯಿಸಿದ್ದರು.

ಆರೋಪಿಯ ಜೊತೆಗೆ ಸ್ನೇಹಿತನಾಗಿದ್ದರಿಂದ ಸಂಧಾನ ಮಾಡಿಕೊಂಡು, ಅತ್ಯಾಚಾರ ಪ್ರಕರಣ ಹಿಂಪಡೆಯಲು ನಿರ್ಧರಿಸಿದ್ದಳು. ಈ ನಿಟ್ಟಿಯಲ್ಲಿ ಶಾಂತಿನಗರ ಠಾಣೆಗೆ ತೆರಳಿ ದೂರನ್ನು ಹಿಂಪಡೆಯುವ ಕುರಿತು ಎಸ್‍ಐ ರೋಹನ್ ಗೊಂಜಾರಿಗೆ ತಿಳಿಸಿದ್ದಾಳೆ. ಇದಕ್ಕೆ ಒಪ್ಪಿಕೊಂಡ ರೋಹನ್, ಆರೋಪಿ ಸ್ನೇಹಿತನನ್ನು ಬಿಡುಗಡೆ ಮಾಡುತ್ತೇನೆ. ನೀನು ಆಗಸ್ಟ್ 16ರಂದು ರಂಜೋಲಿ ಬೈಪಾಸ್ ಬಳಿ ನನ್ನನ್ನು ಭೇಟಿಯಾಗಬೇಕು ಎಂದು ತಿಳಿಸಿದ್ದನಂತೆ.

ರೋಹನ್ ತಿಳಿಸಿದಂತೆ ಯುವತಿ ರಂಜೋಲಿ ಬೈಪಾಸ್ ಬಳಿಗೆ ಹೋಗಿದ್ದಾಳೆ. ಈ ವೇಳೆ ಅಲ್ಲಿಗೆ ಬಂದ ರೋಹನ್ ಆಕೆಯನ್ನು ಕಲ್ಯಾಣ್ ಟೌನ್‍ನ ಅತಿಥಿ ಗೃಹವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ಕುರಿತು ಎಲ್ಲಿಯೂ ಹೇಳದಂತೆ ಎಚ್ಚರಿಕೆ ನೀಡಿದ್ದಾನೆ. ಆದರೆ ಈ ಕುರಿತು ಯುವತಿ ಕೊಂಗೊನ್ ಠಾಣೆಯಲ್ಲಿ ನವೆಂಬರ್ 21ರಂದು ದೂರು ದಾಖಲಿಸಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Leave a Reply

Your email address will not be published.

Back to top button