ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿ ಸಬ್ ಇನ್ಸ್ಪೆಕ್ಟರ್ ವಿರುದ್ಧ ಪತ್ನಿಯೇ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
ಸೂಲಿಬೆಲೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಮೇಶ್ ಅವರ ಪತ್ನಿ, ನಕಲಿ ಪೋಷಕರನ್ನು ಸೃಷ್ಟಿಸಿ ರಮೇಶ್ ಯುವತಿಯೊಬ್ಬಳನ್ನು ಮದುವೆಯಾಗಿದ್ದರು. ಈ ವಿಚಾರ ತಿಳಿದು ಯುವತಿ ದೂರವಾಗಲು ತೀರ್ಮಾನಿಸಿ, ಬೇರೊಬ್ಬರ ಜೊತೆಗೆ ಮದುವೆ ನಿಶ್ಚಯ ಮಾಡಿಸಿಕೊಂಡು, ಎಂಗೇಜ್ ಮೆಂಟ್ ಮಾಡಿಕೊಳ್ಳುವ ದಿನ ಚೌಟ್ರಿಗೆ ಬಂದು ಮದುವೆ ಮುರಿದಿದ್ದರು. ನಂತರ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ ಮೇಲೆ ಯುವತಿಯನ್ನ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿ ಜೊತೆಗಿನ ಶಿಕ್ಷಕನ ಲವ್ವಿಡವ್ವಿ – ಅಶ್ಲೀಲ ಫೋಟೋ ವೈರಲ್
Advertisement
Advertisement
ರಮೇಶ್ಗೆ ಬೇರೆ, ಬೇರೆ ಅಕ್ರಮ ಸಂಬಂಧಗಳಿವೆ. ಈ ಬಗ್ಗೆ ಆತನ ಮೊಬೈಲ್ನಲ್ಲಿ ಅಶ್ಲೀಲ ವೀಡಿಯೋ, ಅರೆಬೆತ್ತಲೆ ಫೋಟೊಗಳು, ಮಾಟ ಮಂತ್ರದಂತ ಫೋಟೊಗಳಿದ್ದು ಕೆಲ ವೀಡಿಯೋಗಳು ವೈರಲ್ ಆಗಿವೆ. ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಬೇರೆ, ಬೇರೆ ಯುವತಿಯರನ್ನು ಮದುವೆಯಾಗಿದ್ದಾರೆ ಎಂದು ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪತಿಯಿಂದಲೇ ಮಾನಸಿಕ ಕಿರುಕುಳವಾಗುತ್ತಿದ್ದು, ರಮೇಶ್ ಜೊತೆ ಚನ್ನರಾಯಪಟ್ಟಣ ಸಬ್ ಇನ್ಸ್ಪೆಕ್ಟರ್ ಶರಣಪ್ಪ ಸಹ ಕೈ ಜೋಡಿಸಿದ್ದು ನ್ಯಾಯ ಕೊಡಿಸಬೇಕು ಅಂತಾ ದೂರು ನೀಡಿದ್ದಾರೆ.
Advertisement
ಸದ್ಯ ಪ್ರಕರಣ ಸಂಬಂಧ ಕೆಲಸ ನಿರ್ವಹಿಸುತ್ತಿದ್ದ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿಯೇ ಸಬ್ ಇನ್ಸ್ಪೆಕ್ಟರ್ ರಮೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದನ್ನೂ ಓದಿ: ಕೆಎಸ್ಆರ್ಟಿಸಿ ಬಸ್ ಚಾಲಕನ ನಿರ್ಲಕ್ಷ್ಯ- ಕಾಲೇಜು ಬಸ್ಗೆ ಡಿಕ್ಕಿ