ತಮಿಳು ನಟ ಕಾರ್ತಿ (Karthi) ನಟನೆಯ ‘ಸರ್ದಾರ್ 2’ (Sardar 2) ಸಿನಿಮಾ ಸೆಟ್‌ನಲ್ಲಿ ಅವಘಡ ನಡೆದಿದ್ದು, ಆ್ಯಕ್ಷನ್ ದೃಶ್ಯ ಚಿತ್ರೀಕರಿಸುವಾಗ 20 ಅಡಿ ಎತ್ತರದಿಂದ ಬಿದ್ದು ಸ್ಟಂಟ್ ಮ್ಯಾನ್ (Stuntman) ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:ಧ್ಯಾನ್, ಸದಾ ನಟನೆಯ ‘ಮೊನಾಲಿಸಾ’ ಚಿತ್ರಕ್ಕೆ 20 ವರ್ಷಗಳ ಸಂಭ್ರಮ
Advertisement
ಜು.15ರಂದು ಚೆನ್ನೈ ಸಾಲಿಗ್ರಾಮಂದಲ್ಲಿರುವ ಎಲ್ ವಿ ಪ್ರಸಾದ್ ಸ್ಟುಡಿಯೋದಲ್ಲಿ ‘ಸರ್ದಾರ್ 2’ ಶೂಟಿಂಗ್ ಆರಂಭಿಸಲಾಗಿತ್ತು. ಕಾರ್ತಿ ನಟನೆಯ ಈ ಸಿನಿಮಾ ಸಾಹಸ ದೃಶ್ಯ ಶೂಟಿಂಗ್ ಮಾಡುವ ವೇಳೆ, 20 ಅಡಿ ಎತ್ತರದಿಂದ ಕುಸಿದು ಬಿದ್ದು, 54 ವರ್ಷದ ಎಜುಮಲೈ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
Advertisement
Advertisement
ಸ್ಥಳದಲ್ಲಿದ್ದ ಕಲಾವಿದರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಎಜುಮಲೈ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಚಿತ್ರತಂಡ ಇದೀಗ ಸಂತಾಪ ಸೂಚಿಸಿದೆ.
Advertisement