ಬೆಂಗಳೂರು: ದಿಗಂತ್‌ಗೆ ಜಿಮ್ನಾಸ್ಟಿಕ್ಸ್ ಗೊತ್ತು. ಇದರಿಂದಾಗಿ ಯಾವುದೇ ತೊಂದರೆ ಆಗಿಲ್ಲ ಎಂದು ಸ್ಟಂಟ್ ಮಾಸ್ಟರ್ ಡೆಫರೆಂಟ್ ಡ್ಯಾನಿ ತಿಳಿಸಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ದಿಗಂತ್ ಅವರು ಬ್ಯಾಕ್‌ಲಿಫ್ಟ್ ಸೊಮಾರ್ ಸಾಲ್ಟ್ ಎಲ್ಲಾ ಮಾಡುತ್ತಿದ್ದರು. ಅವರ ಫಿಟ್ ಆಗಿ ಚೆನ್ನಾಗಿದ್ದರು. ಯಾವಾಗಲೂ ಅವರು ವ್ಯಾಯಾಮ, ಪ್ರ್ಯಾಕ್ಟಿಸ್ ಮಾಡುತ್ತಿದ್ದರು. ಇದರಿಂದಾಗಿ ಅಷ್ಟೇನೂ ತೊಂದರೆ ಇಲ್ಲ ಅನಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಬೀಚ್‌ನಲ್ಲಿ, ಮರಳಿನಲ್ಲಿ ಬ್ಯಾಕ್ ಸೊಮಾರ್ ಸಾಲ್ಟ್, ಫ್ರಂಟ್ ಸೊಮಾರ್ ಸಾಲ್ಟ್ ಮಾಡುವುದು ಕಾಮನ್ ಆಗಿದೆ. ಯಾವಾಗಲೂ ಮಾಡುತ್ತಿದ್ದರೆ ತೊಂದರೆ ಆಗುವುದಿಲ್ಲ. ಆದರೂ ಇದನ್ನು ತುಂಬಾ ದಿನದ ನಂತರ ಮಾಡಿರುವುದರಿಂದ ಈ ರೀತಿ ತೊಂದರೆ ಆಗಿದೆ ಅನಿಸುತ್ತದೆ. ಸೊಮಾರ್ ಸಾಲ್ಟ್ ಮಾಡುವಾಗ ಸ್ವಲ್ಪ ಎತ್ತರದಿಂದ ಮಾಡಿದರೆ ಏನೂ ಆಗುತ್ತಿರಲಿಲ್ಲ. ದಿಗಂತ ಅವರು ಸ್ವಲ್ಪ ಕೆಳಗಿನಿಂದ ಸೊಮಾರ್ ಸಾಲ್ಟ್ ಮಾಡಿದ್ದಾರೆ ಎನಿಸುತ್ತದೆ. ಅದಕ್ಕೆ ಈ ರೀತಿ ಆಗಿದೆ ಎಂದರು. ಇದನ್ನೂ ಓದಿ: ದಿಗಂತ್‌ಗೆ ಏನೂ ಆಗಿಲ್ಲ, ಆತಂಕ ಪಡಬೇಡಿ: ನಟನ ಕುಟುಂಬಸ್ಥರು
ಸ್ಯಾಂಡಲ್‌ವುಡ್ ನಟ ದಿಗಂತ್ ಮಂಚಾಲೆ ಅವರ ಕುತ್ತಿಗೆಗೆ ಪೆಟ್ಟಾಗಿದ್ದು, ಕುಟುಂಬ ಸಮೇತ ಗೋವಾ ಪ್ರವಾಸಕ್ಕೆ ನಟ ತೆರಳಿದ್ದರು. ಸಮುದ್ರ ತಟದಲ್ಲಿ ಸೊಮರ್ ಸಾಲ್ಟ್ ಹೊಡೆಯುವ ವೇಳೆ ಮಿಸ್ಸಾಗಿ ದಿಗಂತ್ ಕುತ್ತಿಗೆಗೆ ಪೆಟ್ಟು ಬಿದ್ದಿದೆ. ಕೂಡಲೇ ಗೋವಾದಲ್ಲಿಯೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಇದೀಗ ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ಪತ್ನಿ ಐಂದ್ರಿತಾ ರೇ ಕೂಡ ದಿಗಂತ್ ಜೊತೆ ಇದ್ದಾರೆ.