ಅರಿಶಿನ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್

Advertisements

ಮುಂಬೈ: ಬಾಲಿವುಡ್ ಸೆಲೆಬ್ರೆಟಿ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಶುಕ್ರವಾರ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ಇಂದು ಕತ್ರಿನಾ ತಮ್ಮ ಅರಿಶಿನ ಶಾಸ್ತ್ರದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Advertisements

ಕತ್ರಿನಾ-ವಿಕ್ಕಿ ಶುಕ್ರವಾರ ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್ ಬರ್ವಾರಾದಲ್ಲಿರುವ ಸಿಕ್ಸ್ ಸೆನ್ಸಸ್ ರೆಸಾರ್ಟ್‍ನಲ್ಲಿ ಅದ್ಧೂರಿಯಾಗಿ ವಿವಾಹವಾದರು. ನೆಚ್ಚಿನ ನಟಿಯ ಮದುವೆ ಫೋಟೋಗಳನ್ನು ನೋಡಲು ಅಭಿಮಾನಿಗಳು ಸಹ ಕಾತುರರಾಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ತಮ್ಮ ಮದುವೆ ಫೋಟೊವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದ ಕತ್ರಿನಾ, ಇಂದು ಅರಿಶಿನ ಶಾಸ್ತ್ರ ಸಮಾರಂಭದ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಅದ್ಧೂರಿಯಾಗಿ ನೆರವೇರಿತು ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಮದುವೆ

Advertisements

ಕತ್ರಿನಾ ಇನ್‍ಸ್ಟಾಗ್ರಾಮ್‍ನಲ್ಲಿ, ಶುಕ್ರ್, ಸಬ್ರ್, ಖುಷ್ ಎಂದು ಬರೆದು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಕತ್ರಿನಾ ಬಿಳಿ ಬಣ್ಣದ ಲೆಹೆಂಗಾ ಮತ್ತು ಮಲ್ಲಿಗೆಯಿಂದ ಮಾಡಿದ ಆಭರಣಗಳನ್ನು ಧರಿಸಿಕೊಂಡು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ವಿಕ್ಕಿ ಬಿಳಿ ಕುರ್ತಾ-ಪೈಜಾಮಾ ಸೆಟ್ ಮತ್ತು ಗುಲಾಬಿ ಬಣ್ಣದ ದುಪಟ್ಟಾದಲ್ಲಿ ಫುಲ್ ಹ್ಯಾಪಿ ಮೂಡ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

Advertisements

ಫೋಟೋ ಒಂದರಲ್ಲಿ ಕತ್ರಿನಾ ವಿಕ್ಕಿ ಕೆನ್ನೆಗೆ ಹಳದಿ ಹಚ್ಚುತ್ತಿದ್ದು, ವಿಕ್ಕಿ ಫುಲ್ ನಾಚಿನೀರಾಗಿದ್ದಾರೆ. ಇನ್ನೂ ಇವರ ಶಾಸ್ತ್ರಕ್ಕೆ ಬಂದ ಸಂಬಂಧಿಗಳು ಫುಲ್ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಕೊನೆಯ ಫೋಟೋದಲ್ಲಿ ಕತ್ರಿನಾ ತನ್ನ ಕುಟುಂಬ ಮತ್ತು ವಿಕ್ಕಿಯ ಸಹೋದರ ಸನ್ನಿ ಕೌಶಲ್ ಅವರ ಜೊತೆ ಸಂಭ್ರಮದಲ್ಲಿದ್ದಾರೆ. ಇದನ್ನೂ ಓದಿ: ಓಟಿಟಿಯಿಂದ ವಿಕ್ಕಿ-ಕತ್ರಿನಾ ವೆಡ್ಡಿಂಗ್ ಕ್ಲಿಪ್ಸ್ 100 ಕೋಟಿ ರೂ. ಆಫರ್

ವಿಕ್ಕಿ-ಕತ್ರಿನಾ 2019ರಿಂದ ಡೇಟಿಂಗ್ ಮಾಡುತ್ತಿದ್ದರು. ಇವರ ಮದುವೆ ವಿಚಾರ ಬಾಲಿವುಡ್ ಅಂಗಳದಲ್ಲಿ ಫುಲ್ ಸದ್ದು ಮಾಡಿತ್ತು. ಡಿ.9 ರಂದು ಹೊಸ ಜೀವನಕ್ಕೆ ಕಾಲಿಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಈ ಜೋಡಿ ತೆರೆ ಎಳೆದಿದೆ.

Advertisements
Exit mobile version