ನವದೆಹಲಿ: ಜೇಮ್ಸ್ ವೆಬ್ ಟೆಲಿಸ್ಕೋಪ್‍ನಲ್ಲಿ(JWST) ಸೆರೆಹಿಡಿಯಲಾದ ಗುರು-ಚಂದ್ರನ ಹಲವಾರು ಬೆರಗುಗೊಳಿಸುವ ಫೋಟೋವನ್ನು ನಾಸಾ ಬಿಡುಗಡೆ ಮಾಡಿದೆ.
ಕಳೆದ ವಾರ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದಿಂದ ತೆಗೆದ ಯೂನಿವರ್ಸ್‍ನ ಹೊಸ ಚಿತ್ರಗಳನ್ನು ನಾಸಾ ಹಂಚಿಕೊಂಡಿತ್ತು. ಅಮೇರಿಕದ ಬಾಹ್ಯಾಕಾಶ ಸಂಸ್ಥೆಯು ಸಹ ಮತ್ತೊಂದು ಅದ್ಭುತ ಫೋಟೋ ಬಿಡುಗಡೆ ಮಾಡಿತ್ತು. ಈ ಸಮಯದಲ್ಲಿ ಗುರು ಮತ್ತು ಚಂದ್ರನ ಸುತ್ತ ಕೇಂದ್ರೀಕೃತವಾಗಿ ತೆಗೆದ ಫೋಟೋಗಳನ್ನು ನಾಸಾ ರಿಲೀಸ್ ಮಾಡಿದೆ. ಇದನ್ನೂ ಓದಿ: ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ಚಿತ್ರ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ
Advertisement
Advertisement
ಈ ಸುಂದರವಾದ ಫೋಟೋಗಳನ್ನು ನಾಸಾ ವಿಜ್ಞಾನಿಗಳ ಅಧ್ಯಯನಕ್ಕೆ ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿಯೂ ಶೇರ್ ಮಾಡಿಕೊಂಡಿದೆ. ಟ್ವೀಟ್‍ನಲ್ಲಿ ಫೋಟೋ ಶೇರ್ ಮಾಡಿದ ನಾಸಾ, ಈ ಚಿತ್ರಗಳನ್ನು ಇಂಜಿನಿಯರಿಂಗ್ ಉದ್ದೇಶಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಇವುಗಳನ್ನು ಈ ವಾರ ನಾವು ಮೊದಲು ರಿಲೀಸ್ ಮಾಡಿದ ರೀತಿಯಲ್ಲಿಯೇ ಸಂಸ್ಕರಿಸಿಲ್ಲ ಎಂದು ಬರೆದುಕೊಂಡಿದೆ.
Advertisement
These images are designed for engineering purposes, so they aren’t processed in the same way as our first images this week. Like some earlier calibration images, these are processed to emphasize certain features. pic.twitter.com/t1tSXyscrM
— NASA Webb Telescope (@NASAWebb) July 14, 2022
Advertisement
ಗುರುಗ್ರಹದಂತಹ ಸೌರವ್ಯೂಹದ ವಸ್ತುಗಳನ್ನು ದೂರದರ್ಶಕವು ಹೇಗೆ ಟ್ರ್ಯಾಕ್ ಮಾಡುತ್ತದೆ ಎಂಬುದನ್ನು ನಾವು ಪರೀಕ್ಷಿಸಿದ್ದೇವೆ. ವೆಬ್ ನಿರೀಕ್ಷೆಗಿಂತ ಉತ್ತಮವಾಗಿ ಕೆಲಸ ಮಾಡಿದೆ. ಗುರುಗ್ರಹದ ಚಂದ್ರ ಯುರೋಪಾವನ್ನು ಸಹ ಸೆರೆ ಹಿಡಿದಿದೆ ಎಂದು ನಾಸಾ ಮತ್ತೊಂದು ಟ್ವೀಟ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ಅಮರನಾಥ ಯಾತ್ರೆ: ನೈಸರ್ಗಿಕ ವಿಕೋಪದಿಂದ 8 ಯಾತ್ರಾರ್ಥಿಗಳು ಸಾವು