ಯಾದಗಿರಿ: ಹಿಜಬ್ ಸಂಬಂಧ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬೆನ್ನಲ್ಲೆ ಯಾದಗಿರಿಯ ಸುರಪುರ ತಾಲೂಕಿನ ಕೆಂಬಾವಿ ಪಟ್ಟಣದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪರೀಕ್ಷೆ ಬಿಟ್ಟು ಮನೆಗೆ ತೆರಳಿದ್ದಾರೆ.
ಹಿಜಬ್ ತೆಗೆಯದೆ ಬೆಳಗ್ಗೆಯಿಂದ ಕೋರ್ಟ್ ಆದೇಶಕ್ಕೆ ಕಾದು ಕುಳಿತಿದ್ದ ವಿದ್ಯಾರ್ಥಿನಿಯರು ತೀರ್ಪು ಪ್ರಕಟವಾಗುತ್ತಿದ್ದಂತೆಯೇ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪೂರ್ವಭಾವಿ ಪರಿಕ್ಷೆ ಬಿಟ್ಟು ಹೊರಕ್ಕೆ ನಡೆದಿದ್ದಾರೆ. ಹಿಜಬ್ ಬಿಟ್ಟು ಕ್ಲಾಸ್‍ಗೆ ಬರಲ್ಲ ಎಂದು ಪರೀಕ್ಷೆ ಬಿಟ್ಟು 08 ವಿದ್ಯಾರ್ಥಿಗಳು ಮನೆಗೆ ಹೋಗಿದ್ದಾರೆ.
Advertisement
ಬಳಿಕ ನಗರದ ಜ್ಯೂನಿಯರ್ ಪಿಯು ಕಾಲೇಜು ವಿದ್ಯಾರ್ಥಿನಿ ಅಸ್ರಾ ಮಾಧ್ಯಮದವರೊಂದಿಗೆ ಮಾತನಾಡಿ, ಹೈಕೋರ್ಟ್ ಆದೇಶ ಬಂದರೂ ನಾವು ಹಿಜಬ್ ಧರಿಸುತ್ತೆವೆ, ನಮಗೆ ಶಿಕ್ಷಣ ಹಾಗೂ ಹಿಜಬ್ ಕೂಡ ಮುಖ್ಯವಾಗಿದೆ. ನಾವು ಹಿಜಬ್ ತೆಗೆಯಲ್ಲ. ಹಿಜಬ್ ಧರಿಸಿ ಪೂರಕ ಪರೀಕ್ಷೆ ಬರೆಯುತ್ತೆವೆ. ಹಿಜಬ್ ತೆಗೆದು ಪರೀಕ್ಷೆ ಬರೆಬೇಕೆಂದರೆ ನಾವು ಪರೀಕ್ಷೆ ಬರೆಯಲ್ಲ, ಹಿಜಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಖೇಲ್ ಖತಂ, ನಾಟಕ್ ಬಂದ್, ಶಾಲೆಗೆ ಹಿಂತಿರುಗಿ: ಮಾಳವಿಕಾ ಅವಿನಾಶ್
Advertisement
Advertisement
ಕೆಂಬಾವಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಶಕುಂತಲಾ ಮಾತನಾಡಿ, ನಾವು ಕೋರ್ಟ್ ಆದೇಶ ಪಾಲಿಸಿ ಅಂತ ಹೇಳಿದ್ದೇವೆ. ನಾವು ಬಹಳಷ್ಟು ಮನವೋಲಿಸಿದರೂ ವಿದ್ಯಾರ್ಥಿನಿಯರು ನಮ್ಮ ಮಾತು ಕೇಳಲಿಲ್ಲ. ಹಿಜಬ್ ಹಾಕೊಂಡೇ ಬರುವುದಾಗಿ ಪಟ್ಟು ಹಿಡಿದಿದ್ದಾರೆ. ಅದಕ್ಕೆ ಅವರು ಕ್ಲಾಸ್ ಬಿಟ್ಟು ಹೋಗಿದ್ದಾರೆ ಎಂದರು. ಇದನ್ನೂ ಓದಿ: ಹಿಜಬ್ ಇಸ್ಲಾಂ ಆಚರಣೆಯಲ್ಲ ಅನ್ನೋ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಲ್ಲ: ಯು.ಟಿ.ಖಾದರ್
Advertisement
ಅಲ್ಲದೆ ಪರೀಕ್ಷೆಗೆ ಬಂದಾಗ ಹಿಜಬ್ ತೆಗೆದು ಕುಳಿತುಕೊಳ್ಳಿ ಎಂದಾಗ ವಿದ್ಯಾರ್ಥಿನಿಯರು ತೆಗೆಯಲ್ಲ ಅಂದಿದ್ದಾರೆ. ಕೋರ್ಟ್ ಆದೇಶ ಬರುವವರೆಗೂ ಕಾಯ್ತೀವಿ ಅಂತ ಅಂದಿದ್ದರು. ಕೋರ್ಟ್ ಆದೇಶ ಬಂದಾಗ ಕ್ಲಾಸ್ ಬಿಟ್ಟು ಹೋಗುತ್ತೇವೆ ಅಂತ ಬಿಟ್ಟು ಹೋಗಿದ್ದಾರೆ. ನಾವು ಬುರ್ಖಾ, ಹಿಜಬ್ ಬಿಟ್ಟು ತರತಿಗೆ ಬರಲ್ಲ ಅಂತ ಹೇಳಿದ್ದಾರೆ. ಒಟ್ಟು 35 ಜನ ವಿದ್ಯಾರ್ಥಿನಿಯರು ಕ್ಲಾಸ್ ಬಹಿಷ್ಕರಿಸಿದ್ದಾರೆ. ಕೆಲವು ಜನ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿದ್ದಾರೆ. ನಾವು ಮತ್ತು ಪೋಲಿಸ್ ಇಲಾಖೆಯವರು ಮನವೋಲಿಸಿದ್ದೇವೆ. ಆದರೆ ಅವರು ದಿಕ್ಕರಿಸಿ ಹೊರ ನಡೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಐತಿಹಾಸಿಕ ತೀರ್ಪು..?: ಹಿಜಬ್ ಇಸ್ಲಾಂ ಅಗತ್ಯವಾದ ಆಚರಣೆ ಅಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದಿದೆ. ಎಲ್ಲರೂ ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಸರ್ಕಾರದ ಆದೇಶವನ್ನು ಪ್ರಶ್ನಿಸಿ ತರಗತಿಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಪೀಠ ವಜಾ ಮಾಡಿದೆ.