– ಮೂವರು ಆರೋಪಿಗಳ ಬಂಧನ
ರಾಮನಗರ: ವಿದ್ಯಾರ್ಥಿನಿಯರ ಫೋಟೊ ಕ್ಲಿಕ್ಕಿಸಿದ್ದನ್ನು ಪ್ರಶ್ನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಸ್ಥಳೀಯ ಯುವಕರು ಹಲ್ಲೆ ನಡೆಸಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ರಾಮನಗರ (Ramanagara) ತಾಲೂಕಿನ ಚಿಕ್ಕೇನಹಳ್ಳಿ ಫಾರ್ಮ್‌ಹೌಸ್‌ನಲ್ಲಿ (FarmHouse) ನಡೆದಿದೆ.
ಪುನೀತ್ (21) ಮೃತ ವಿದ್ಯಾರ್ಥಿ. ಬೆಂಗಳೂರು ಮೂಲದ 7 ವಿದ್ಯಾರ್ಥಿಗಳು ರಜಾ ದಿನ ಕಳೆಯಲು ರಾಮನಗರ ತಾಲೂಕಿನ ಚಿಕ್ಕೇನಹಳ್ಳಿ ಫಾರ್ಮ್‌ಹೌಸ್‌ಗೆ ಹೋಗಿದ್ದರು. ಫಾರ್ಮ್‌ಹೌಸ್‌ನಲ್ಲಿ ಸ್ವಿಮ್ಮಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿಯರ ಪೋಟೊ ಕ್ಲಿಕ್ಕಿಸಲು ಸ್ಥಳೀಯ ಯುವಕರು ಬಂದಿದ್ದರು. ಫೋಟೋ ತೆಗೆಯಲು ಮುಂದಾದ ಯುವಕರನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ವಿದ್ಯಾರ್ಥಿಗಳ ಮೇಲೆ ಯುವಕರು ಕೈ ಮಾಡಿದ್ದಾರೆ. ಪುನೀತ್ ಎಂಬ ವಿದ್ಯಾರ್ಥಿಯ ತಲೆಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಪೊಲೀಸರಿಗೆ ಯುವಕರು ಮಾಹಿತಿ ನೀಡಿದ್ದಾರೆ. ಕಳೆದ ಅ.26 ರಂದು ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ನೋಟಿಸ್ ವಾಪಸ್ ಪಡೆದ್ರೆ, ವಕ್ಫ್ ಜಮೀನು ವಾಪಸ್ ಹೋಗೋದಿಲ್ಲ: ಛಲವಾದಿ
ಹಲ್ಲೆಗೊಳಗಾದ ಪುನೀತ್ ಎಂಬಾತನನ್ನು ಕೆಂಗೇರಿ (Kengeri) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮೆದುಳು ನಿಷ್ಕ್ರಿಯಗೊಂಡಿದೆ. ಚಿಕಿತ್ಸೆ ಫಲಕಾರಿಯಾಗದೆ ಅ.29ರಂದು ಪುನೀತ್ ಸಾವನ್ನಪ್ಪಿದ್ದಾನೆ. ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಯುವಕನ ಅಂಗಾಂಗ ದಾನ ಮಾಡಲಾಗಿದೆ. ಪೋಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಹೊನ್ನಾಪುರ ಗ್ರಾಮದ ಚಂದ್ರು, ನಾಗೇಶ್, ಮುರಳಿ ಬಂಧಿತ ಆರೋಪಿಗಳು. ಇದನ್ನೂ ಓದಿ: ಅರ್ಧದಷ್ಟು ವಿದ್ಯುತ್ ಸರಬರಾಜು ಕಡಿತ – ಬಾಂಗ್ಲಾಗೆ ಅದಾನಿ ಪವರ್ ಶಾಕ್