ಚಿತ್ರದುರ್ಗ: ಬಹುತೇಕ ವಿದ್ಯಾರ್ಥಿಗಳ ಪಾಲಿಗೆ ಗಣಿತ ಕಬ್ಬಿಣದ ಕಡಲೆಯೇ ಆಗಿರುತ್ತದೆ. ಅದರಲ್ಲೂ ಮಗ್ಗಿಯಂತೂ ಕಷ್ಟದಾಯಕವಾಗಿರುತ್ತದೆ. ಆದರೆ ಕೋಟೆನಾಡಿನಲ್ಲಿ ವಿದ್ಯಾರ್ಥಿ ಮಾತ್ರ 6,000 ಮಗ್ಗಿವರೆಗೆ ಸುಲಭವಾಗಿ ಹೇಳಬಲ್ಲ ವಿಧಾನವನ್ನು ಕಂಡುಕೊಂಡಿದ್ದಾರೆ.
ಚಿತ್ರದುರ್ಗ ನಗರದ ಬ್ಯಾಂಕ್ ಕಾಲೋನಿಯಲ್ಲಿನ ಹ್ಯಾಪಿ ಹೋಮ್ ಸ್ಕೂಲ್ ಮುಖ್ಯಸ್ಥರು ಹಾಗೂ ಶಿಕ್ಷಕಿಯಾಗಿರೋ ಮಾಲಾ ಅವರ ಪುತ್ರ ಸಿದ್ಧಾರ್ಥರಿಗೆ ಚಿಕ್ಕವಯಸ್ಸಿನಿಂದಲೂ ಗಣಿತದ ಬಗ್ಗೆ ಬಾರಿ ಆಸಕ್ತಿ. 6 ವರ್ಷದವನಿದ್ದಾಗಲೇ ಅಬ್ಯಾಕಸ್ ನಲ್ಲಿ ತುಂಬಾ ಫಾಸ್ಟ್ ಆಗಿದ್ದನು. ಆಗ ಓರ್ವ ವಿದ್ಯಾರ್ಥಿ 100ರ ಮಗ್ಗಿ ಹೇಳುವುದು ನೋಡಿ ಆಕರ್ಷಿತನಾಗಿದ್ದ ಈ ಯುವಕ ಕೇವಲ 1 ವಾರದ ನಂತರ 500 ವರೆಗೆ ಮಗ್ಗಿ ಹೇಳಲು ಶುರು ಮಾಡಿದ್ದಾರಂತೆ.
Advertisement
ಇದೀಗ 6000 ರವರೆಗೆ ಏನೇ ಕೇಳಿದರೂ ಕ್ಷಣಾರ್ಧದಲ್ಲಿ ಫಟಾಫಟ್ ಅಂತ ಮಗ್ಗಿ ಹೇಳುತ್ತಾರೆ. ತಾನೇ ಖುದ್ದಾಗಿ 2ರಿಂದ 6,000ದವರೆಗೆ ಮಗ್ಗಿಯನ್ನು ಸುಲಭವಾಗಿ ಬರೆಯಬಲ್ಲ ವಿಧಾನವನ್ನು ಸಹ ಕಂಡು ಹಿಡಿದಿದ್ದಾರೆ. ಅದಕ್ಕೆ ಟಿಕ್ ಟ್ಯಾಕ್ ಟೂ ಅಂತ ಹೆಸರಿಟ್ಟಿದ್ದಾರೆ. ಎರಡು ಟೇಬಲ್ ಹಾಕಿ ಮಗ್ಗಿಯನ್ನು ವಿಸುವಲೇಸೇಷನ್ ನಲ್ಲಿ ಸುಲಭವಾಗಿ ಕಲಿಯುವ ವಿಧಾನವನ್ನು ಕಂಡುಕೊಂಡಿದ್ದಾರೆ. ಆ ಮೂಲಕ ಯಾವುದೇ ಮಗ್ಗಿ ಕೇಳಿದರೂ ಕ್ಷಣಾರ್ಧದಲ್ಲಿ ಹೇಳುವಂತ ಅಭ್ಯಾಸ ರೂಡಿಸಿಕೊಂಡಿದ್ದಾರೆ. ಅಂತೆಯೇ ಅದೇ ವಿಧಾನವನ್ನು ಅಮ್ಮ ಕಟ್ಟಿದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಾರೆ.
Advertisement
Advertisement
ಇದೀಗ ಬಿಬಿಎಂ ಓದುತ್ತಿರುವ ಈ ವಿದ್ಯಾರ್ಥಿಯ ಪ್ರತಿಭೆ ಕಂಡು ಖುದ್ದು ಶಿಕ್ಷಕಿ ಆಗಿರುವ ತಾಯಿಯೇ ಬೆರಗಾಗಿದ್ದಾರೆ. ಅಲ್ಲದೆ ಮಗನ ಸೂತ್ರವನ್ನೇ ಅನುಸರಿಸಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಆ ಮೂಲಕ ಕಬ್ಬಿಣದ ಕಡಲೆ ಆಗಿದ್ದ ಮಗ್ಗಿಯನ್ನು ಸರಳಸೂತ್ರದಲ್ಲಿ ಮಕ್ಕಳಿಗೆ ಹೇಳಿ ಕೊಡುತ್ತಿದ್ದಾರೆ. ಇತರೆ ಶಿಕ್ಷಕರು ಸಹ ವಿದ್ಯಾರ್ಥಿಯ ಪ್ರತಿಭೆಗೆ ಶಹಬ್ಬಾಶ್ ಗಿರಿ ನೀಡಿದ್ದು, ಈ ಕ್ಷೇತ್ರದಲ್ಲಿ ಅಗಾಧವಾಗಿ ಸಾಧಿಸಿ ಐಎಎಸ್ ಅಧಿಕಾರಿ ಆಗಬೇಕು ಎಂಬ ಕನಸಿದೆ ಎಂದು ಸಿದ್ಧಾರ್ಥ್ ತಾಯಿ ಹೇಳಿದ್ದಾರೆ.
Advertisement
ಒಟ್ಟಾರೆಯಾಗಿ ಕೋಟೆನಾಡಿನ ಈ ವಿದ್ಯಾರ್ಥಿಯ ಸರಳಸೂತ್ರ ಈಗ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಅಪರೂಪದ ಪ್ರತಿಭೆಗೆ ವಿವಿಧ ಮಠ ಮಾನ್ಯಗಳು ಗೌರವಿಸಿ ಅಭಿನಂದಿಸುವ ಮೂಲಕ ಬೆನ್ನು ತಟ್ಟಿವೆ. ಪ್ರತಿಭಾವಂತ ಯುವಕನ ಕನಸು ಕೂಡ ನನಸಾಗಲಿ ಎಂಬುದು ದುರ್ಗದ ಜನರ ಆಶಯ.