ಬೆಂಗಳೂರು: ಮೂರನೇ ಕೊರೊನಾ ಅಲೆಯ ಭೀತಿ ಇರುವಾಗಲೇ ಮಕ್ಕಳೇ ಟಾರ್ಗೆಟ್ ಅಂತಾ ಹೇಳುತ್ತಿರುವಾಗಲೇ ರಾಜ್ಯ ಸರ್ಕಾರ ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಆಫ್ ಲೈನ್ ತರಗತಿಗಳನ್ನ ಶುರು ಮಾಡಿದೆ. ವಿದ್ಯಾರ್ಥಿಗಳ ಕೈಯಲ್ಲಿ ದೀಪ ಬೆಳಗಿಸಿ ಶಾಲೆಗೆ ಶಿಕ್ಷಕರು ಸ್ವಾಗತ ಕೋರಿದ್ದಾರೆ.
ಕೊರೊನಾ ಹೆಮ್ಮಾರಿಯ ಅಬ್ಬರಕ್ಕೆ ಇಡೀ ರಾಜ್ಯ ತಲ್ಲಣಗೊಂಡಿದೆ. ಚೀನಾದಿಂದ ಶುರುವಾದ ಕೊರೊನಾ ವೈರಾಣುವಿನ ಆರ್ಭಟ ಇಡೀ ಭೂಮಂಡಲವನ್ನೇ ಆಕ್ರಮಿಸಿ ಕೋಟ್ಯಾಂತರ ಜನರ ಜೀವನವನ್ನ ಹಾಳು ಮಾಡಿದೆ. ಇದನ್ನೂ ಓದಿ: ಕಾಂತ್ರಿಕಾರಿ ಅಂದ್ರೆ ಗುಂಡು ಹೊಡೆಯುವುದು ಅಲ್ಲ – ಚೇತನ್‍ಗೆ ಹೆಚ್‍ಡಿಕೆ ತಿರುಗೇಟು
Advertisement
Advertisement
ಶಾಲೆಗಳ ಕಡೆಗೆ ವಿದ್ಯಾರ್ಥಿಗಳು ಬರ್ತಾರಾ ಅನ್ನೋ ಆತಂಕವಿತ್ತು, ಅದರೇ ಮಕ್ಕಳು ಶಾಲೆಗಳಿಗೆ ಬರ್ತಿದ್ದಾರೆ. 18 ತಿಂಗಳ ಬಳಿಕ ಶಾಲೆಗಳು ಆರಂಭವಾಗಿದ್ದು ಇಂದು ಚಾಮರಾಜಪೇಟೆಯ ಬಿಬಿಎಂಪಿ ಪ್ರೌಢಶಾಲೆಯಲ್ಲಿ ಮಕ್ಕಳು ಕೊರೊನಾ ನಿಯಮಗಳ ಪ್ರಕಾರ ಶಾಲೆಗೆ ಆಗಮಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಹೂ ಹಾಕಿ, ಚಪ್ಪಾಳೆ ತಟ್ಟಿ, ಡಿಫರೆಂಟಾಗಿ ಸ್ವಾಗತಿಸಿದ ಶಿಕ್ಷಕರು
Advertisement
Advertisement
ಕೊರೊನಾದಿಂದ ಕ್ಲೋಸ್ ಆಗಿದ್ದ ಆಫ್ ಲೈನ್ ತರಗತಿಗಳು ಓಪನ್ ಆದ ಸಂತಸದಲ್ಲಿ ಶಿಕ್ಷಕರು ಮತ್ತು ಮಕ್ಕಳು ಇದ್ದಾರೆ. ಬಹಳ ದಿನಗಳ ನಂತರ ಶಾಲೆಗೆ ಬರ್ತಿರೋ ವಿದ್ಯಾರ್ಥಿಗಳ ಕೈಯಲ್ಲಿ ಈ ಶಾಲೆಯ ಶಿಕ್ಷಕರು ದೀಪವನ್ನ ಬೆಳಗಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಬೆಳಗಲಿ ಅಂತಾ ಹಾರೈಸಿದ್ದಾರೆ.