ಬೆಳಗಾವಿ: ಮಕ್ಕಳು ತಪ್ಪು ಮಾಡಿದರೆ ಅವರಿಗೆ ತಿದ್ದಿ ಬುದ್ಧಿ ಹೇಳುವುದು ಶಿಕ್ಷಕರ ಕರ್ತವ್ಯವಾಗಿರುತ್ತೆ. ಆದರೆ ಇಲ್ಲೊಬ್ಬ ಶಿಕ್ಷಕಿ ಮಕ್ಕಳ ಮೇಲೆ ಅಮಾನವೀಯ ರೀತಿ ಹಲ್ಲೆ ಮಾಡಿದ್ದಾರೆ.
ತರಗತಿಯಲ್ಲಿ ವಿದ್ಯಾರ್ಥಿಗಳು ಮಾತನಾಡುವುದನ್ನೇ ಗದ್ದಲ ಎಂದು ಬಿಂಬಿಸಿ ಶಿಕ್ಷಕಿ ಮಕ್ಕಳನ್ನು ಮನ ಬಂದಂತೆ ಕಟ್ಟಿಗೆಯಿಂದ ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಅರ್ಜುನವಾಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಂಥಹದೊಂದು ಅಮಾನವಿಯ ಕೃತ್ಯ ನಡೆದಿದೆ. ನಮಗೆ ಈ ಶಿಕ್ಷಕಿ ಬೇಡ ಎಂದು ಮಕ್ಕಳು ಗೋಗರೆಯುತ್ತಿದ್ದಾರೆ.
Advertisement
Advertisement
ಅರ್ಚನಾ ಸಾಗರ ಮಕ್ಕಳ ಮೇಲೆ ರಾಕ್ಷಿಸಿ ವರ್ತನೆ ಪ್ರದರ್ಶಿಸಿದ ವಿಜ್ಞಾನ ಶಿಕ್ಷಕಿ. 9ನೇ ತರಗತಿ ವಿದ್ಯಾರ್ಥಿಗಳು ತರಗತಿಯಲ್ಲಿ ಮಾತನಾಡುವದನ್ನೇ ಗದ್ದಲ ಎಂದು ಬಿಂಬಿಸಿ ಅರ್ಚನ ಮಕ್ಕಳನ್ನು ಮನ ಬಂದಂತೆ ಕಟ್ಟಿಗೆಯಿಂದ ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ. ಈ ಪ್ರೌಢ ಶಾಲೆಯಲ್ಲಿ ಒಟ್ಟು 230 ವಿದ್ಯಾರ್ಥಿಗಳು ಓದುತ್ತಿದ್ದು, ಅರ್ಚನಾ ಶಾಲೆಗೆ ನೇಮಕವಾಗಿ ಬಂದಾಗಿನಿಂದ ಇದೇ ರೀತಿ ದರ್ಪ ಮೆರೆಯುತ್ತಿದ್ದಾರೆ ಎನ್ನಲಾಗಿದೆ. ಶಾಲೆಯಲ್ಲಿ ಸರಿಯಾಗಿ ಪಾಠ ಮಾಡದೆ ಮೊಬೈಲ್ ಫೋನ್‍ನಲ್ಲಿ ಕಾಲಹರಣ ಮಾಡುತ್ತಾರೆ. ಪಾಠ ಮಾಡದೆ ಉತ್ತರ ಹೇಳಿ ಎಂದು ಗದರಿಸುವುದು ಹೊಡೆಯುವುದು ಮಾಡುತ್ತಾರೆ ಎಂದು ಶಾಲಾ ಮಕ್ಕಳ ಆರೋಪಿಸಿದ್ದಾರೆ.
Advertisement
Advertisement
ಶಾಲಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೀಗಾಗಿ ಅರ್ಚನಾ ಸಿಸಿಟಿವಿ ಇರದ ಜಾಗಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ರಾಕ್ಷಸಿಯವಾಗಿ ವರ್ತಿಸಿದ್ದಾರೆ. ಮಕ್ಕಳ ಬಾಸುಂಡೆ ನೋಡಿ ಪೋಷಕರು ಶಿಕ್ಷಕಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಶಾಲಾ ಸುಧಾರಣಾ ಸಮಿತಿಯವರು ಶಿಕ್ಷಕಿಯ ಮೇಲೆ ಕ್ರಮಕ್ಕೆ ಆಗ್ರಹಿಸಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಕಿಗೆ ನೋಟೀಸ್ ನೀಡಲಾಗಿದೆ ಉತ್ತರದ ಬಳಿಕ ಕ್ರಮ ಜರುಗಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಮಕ್ಕಳ ಮೇಲೆ ಶಿಕ್ಷಕಿ ಅರ್ಚನಾ ಸಾಗರ ನಡೆಸಿರುವ ಹಲ್ಲೆಗೆ ಅರ್ಜುನವಾಡ ಗ್ರಾಮದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ ಪಡುತ್ತಿದ್ದಾರೆ.