ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊನಾಪೂರ ಹಾಗೂ ಪರಮನಟ್ಟಿ ಗ್ರಾಮಗಳಿಗೆ ಬಸ್ ಸಂಚಾರ ವ್ಯವಸ್ಥೆ ಕಲ್ಫಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳೇ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.
ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲವೆಂಬ ಕಾರಣಕ್ಕೆ ವಿದ್ಯಾರ್ಥಿಗಳೇ ಬಸ್ ತಡೆದು ನಿಲ್ಲಿಸಿ, ರಸ್ತೆಯಲ್ಲೇ ಕುಳಿತು ಓದುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಸರ್ಕಾರದ ವಿರುದ್ಧ ಘೋಷಣೆಗಳನ್ನೂ ಕೂಗಿದ್ದು, ಕೊನಾಪೂರು ಗ್ರಾಮಕ್ಕೆ ಬಸ್ ಬಿಡುವರೆಗೂ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾಗೆ ಝೆಡ್ ಶ್ರೇಣಿ ಭದ್ರತೆ
Advertisement
Advertisement
ಇಲ್ಲಿನ ಗ್ರಾಮಗಳಿಗೆ ಹಲವು ತಿಂಗಳಿನಿಂದಲೂ ಬಸ್ ಸೌಲಭ್ಯವೇ ಇಲ್ಲದೆ ವಿದ್ಯಾರ್ಥಿಗಳು ಪ್ರತಿದಿನ 3 ಕಿ.ಮೀ. ನಡೆದು ಶಾಲೆಗೆ ತೆರಳಬೇಕಿದೆ. ಇದನ್ನು ತಪ್ಪಿಸುವಂತೆ ವಿದ್ಯಾರ್ಥಿಗಳು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ವಯಸ್ಕರು ಮದುವೆಯಾಗಲು ಕುಟುಂಬ, ಜಾತಿ ಸಮುದಾಯದ ಒಪ್ಪಿಗೆ ಅವಶ್ಯವಿಲ್ಲ: ಹೈಕೋರ್ಟ್
Advertisement
Advertisement
ಗ್ರಾಮಕ್ಕೆ ಬಸ್ ಸಂಚರಿಸಲು ಒತ್ತಾಯಿಸಿ ಕಳೆದ ವರ್ಷವೂ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ್ದರು.