ಮೈಸೂರು: ಮುಖ್ಯ ಶಿಕ್ಷಕಿಯ ವರ್ಗಾವಣೆಯನ್ನು ಖಂಡಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದ್ದಾರೆ.
ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಮುಖ್ಯ ಶಿಕ್ಷಕಿ ಪ್ರತಿಮಾ ಹಲವಾರು ವರ್ಷದಿಂದ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿ ಸ್ನೇಹಿ ಶಿಕ್ಷಕಿಯಾಗಿದ್ದರು. ಆದರೆ ಈಗ ಅವರನ್ನು ಸರ್ಕಾರ ಬೇರೆಡೆಗೆ ವರ್ಗಾವಣೆ ಮಾಡಿದೆ. ಇದನ್ನು ಖಂಡಿಸಿ ಶಾಲೆಯ ಕೊಠಡಿಗಳಿಗೆ ಬೆಳಗ್ಗೆಯಿಂದಲೇ ಬೀಗ ಹಾಕಿದ್ದಾರೆ.
Advertisement
Advertisement
ಕ್ಷೇತ್ರ ಶಿಕ್ಷಣಾಧಿಕಾರಿ ಬಂದು ವರ್ಗಾವಣೆ ರದ್ದು ಮಾಡುವವರೆಗೂ ಶಾಲೆಗೆ ಹೋಗಲ್ಲ ಎಂದು ಪಟ್ಟು ಹಿಡಿದು ಮಕ್ಕಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಶಿಧರ ಹಾಗೂ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯತ್ ಅಧ್ಯಕ್ಷ ತಿರುಪತಿ ನಾಯಕ ಮುಖ್ಯ ಶಿಕ್ಷಕಿ ಅವರನ್ನು ವೈಯಕ್ತಿಕ ದ್ವೇಷದಿಂದ ವರ್ಗಾವಣೆ ಮಾಡಿಸಿದ್ದಾರೆ ಎಂದು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆರೋಪಿಸಿದ್ದಾರೆ.
Advertisement
Advertisement
ಮೇಡಂ ಈ ಶಾಲೆಗೆ ಬಂದು 12 ವರ್ಷಗಳಾಗಿದೆ. ಇಲ್ಲಿಯವರೆಗೂ ಈ ಶಾಲೆಯಲ್ಲಿ ಯಾವುದೇ ರೀತಿ ತೊಂದರೆ ಇಲ್ಲ. ಈ ಮೇಡಂ ಮಕ್ಕಳಿಗೆ ಒಳ್ಳೆಯ ಪಾಠ, ನಡವಳಿಕೆ ಮತ್ತು ನಲಿಕಲಿಯನ್ನು ಕಲಿಸಿಕೊಂಡು ಬಂದಿದ್ದಾರೆ. ಈಗ ಏಕಾಏಕಿ ಮೇಡಂ ಅವರನ್ನು ವರ್ಗಾವಣೆ ಮಾಡಿದ್ದಾರೆ. ಬೆಳಗ್ಗೆ 8.30 ಕ್ಕೆ ಬಂದು ಸಂಜೆ 5 ಗಂಟೆಯವರೆಗೂ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಇಂತಹ ಶಿಕ್ಷಕಿ ಮತ್ತೆ ಸಿಗುವುದಿಲ್ಲ, ಆದ್ದರಿಂದ ಈ ಶಾಲೆಯಲ್ಲೇ ಕರ್ತವ್ಯ ನಿರ್ವಹಿಸಬೇಕೆಂದು ಆಗ್ರಹಿಸಿ ನಾವು ಪ್ರತಿಭಟಿಸುತ್ತಿದ್ದೇವೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv