ಶಿಕ್ಷಕರ ಹುದ್ದೆ ಭರ್ತಿ ಮಾಡಿ- ಶಾಲೆಗೆ ಬೀಗ ಜಡಿದು ಮಕ್ಕಳೊಂದಿಗೆ ಪಾಲಕರು ಧರಣಿ

Public TV
1 Min Read
GADAG SCHOOL PROTEST

ಗದಗ: ತಾಲೂಕು ಕದಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಇಂಗ್ಲಿಷ್ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕೆಂದು ಮಕ್ಕಳು ಪಾಲಕರೊಂದಿಗೆ ಪ್ರತಿಭಟನೆ ಮಾಡಿದರು.

GADAG SCHOOL PROTEST 2 2

ಶಾಲೆ ಬಂದ್ ಮಾಡಿ, ಕೊಠಡಿಗಳಿಗೆ ಬೀಗ ಜಡಿದು ಶಿಕ್ಷಣಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 3 ವರ್ಷಗಳಿಂದ ಮಕ್ಕಳ ಅಳಲು ಆಲಿಸದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಶಾಲೆಯಲ್ಲಿ ಮೊದಲು 2ವರ್ಷ ವಾರಕ್ಕೆ ಎರಡು ದಿನದಂತೆ ಅತಿಥಿ ಶಿಕ್ಷಕರು ಬಂದು ಪಾಠ ಮಾಡುತ್ತಿದ್ದರು. ಆದರೆ ಈಗ ಮೂರು ವರ್ಷದ ಹಿಂದೆ ಇದ್ದ ಇಂಗ್ಲಿಷ್ ವಿಷಯದ ಅತಿಥಿ ಶಿಕ್ಷಕರು ಸಹ ಡೆಪ್ಟೇಷನ್ ಮೇಲೆ ಬೇರೆ ಶಾಲೆಗೆ ಹೋಗಿದ್ದಾರೆ. 3 ವರ್ಷದಿಂದ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಿ ಪರದಾಡುತ್ತಿದ್ದಾರೆ. ಇದರಿಂದ ಮಕ್ಕಳ ಕಲಿಕಾ ಸಾಮರ್ಥ್ಯ ಕುಂಠಿತವಾಗಿದೆ. ಮಕ್ಕಳು ಇಂಗ್ಲಿಷ್ ಕಲಿಕೆಯಲ್ಲಿ ಹಿಂದೆ ಬೀಳುವಂತಾಗಿದೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿಗೆ ಸಹಾಯ ಕೋರಿದ ಮಂಜು

GADAG SCHOOL PROTEST 2 1

ಖಾಲಿ ಇರುವ ಶಿಕ್ಷಕರ ನೇಮಕಕ್ಕೆ ಶಿಕ್ಷಣಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಮನವಿ ನೀಡಲಾಗಿದೆ. 2 ವರ್ಷದಿಂದ ಕೊರೊನಾದ ಕುಂಟುನೆಪಗಳನ್ನು ಹೇಳಿಕೊಂಡು ಕಾಲ ದೂಡಿದರು. ಈಗಲೂ ಹಾಗೆ ಮಾಡುತ್ತಿದ್ದಾರೆ. ನಮ್ಮ ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲಿಷ್ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಹಳ್ಳಿಗಳಲ್ಲಿ ಟ್ಯೂಷನ್ ಸಹ ಇರುವುದಿಲ್ಲ. ಅದರಲ್ಲೂ ಇಂಗ್ಲಿಷ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿದೆ. ಗ್ರಾಮೀಣ ಪ್ರದೇಶದತ್ತ ಅಧಿಕಾರಿಗಳು ಗಮನ ಹರಿಸಿ, ಕೂಡಲೇ ಖಾಲಿ ಇರುವ ಶಿಕ್ಷಕರ ನೇಮಕ ಮಾಡಬೇಕೆಂದು ಆಗ್ರಹಿಸಿದರು. ಸ್ಥಳಕ್ಕೆ ಶಿಕ್ಷಣಾಧಿಕಾರಿಗಳು ಬರಬೇಕು, ಶೀಘ್ರದಲ್ಲೇ ಶಿಕ್ಷಕರ ನಿಯೋಜನೆ ಮಾಡುವಂತೆ ಪಟ್ಟು ಹಿಡಿದರು. ನಂತರ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ, ಎಮ್.ಎ.ರಡ್ಡೆರ್, ಪೊಲೀಸ್ ಅಧಿಕಾರಿ ಭೇಟಿ ನೀಡಿ, ಪರಿಶೀಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *