ಬೆಂಗಳೂರು: ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ರಧಾನಿ ಮೋದಿ ಹಾಗೂ ರಾಜ್ಯ ಸರ್ಕಾರ ವೈರಸ್ ತಡೆಗಟ್ಟಲು ನೀಡಿರುವ ಲಾಕ್‍ಡೌನ್‍ನಿಂದ ಗ್ರಾಮೀಣ ಪ್ರದೇಶಗಳಲ್ಲಿ ಜನರು ಕಂಗಾಲಾಗಿದ್ದಾರೆ.
ಹೊರಗೆ ಬಂದರೆ ವೈರಸ್ ಹರಡುವ ಭೀತಿಯಿಂದ ಜನರು ಮನೆಯಿಂದ ಹೊರಗೆ ಬರದೆ ಲಾಕ್‍ಡೌನ್‍ಗೆ ನೈತಿಕ ಬೆಂಬಲವನ್ನ ನೀಡಿದ್ದಾರೆ. ಇಂತಹವರಿಗೆ ನೆಲಮಂಗಲ ಸಮೀಪದ ವಡೇರಹಳ್ಳಿಯ ವಿದ್ಯಾರ್ಥಿ ಮಿತ್ರ ಒಕ್ಕೂಟದಿಂದ ನೂರಾರು ಕುಟುಂಬಗಳಿಗೆ ಮಾಸ್ಕ್, ದಿನಸಿ ಪದಾರ್ಥಗಳು ಹಾಗೂ ತರಕಾರಿಗಳನ್ನ ವಿತರಣೆ ಮಾಡಲಾಯಿತು.
Advertisement
Advertisement
ವಿದ್ಯಾರ್ಥಿ ಮಿತ್ರ ಒಕ್ಕೂಟ ವತಿಯಿಂದ ದಾಸನಪುರ ಹೋಬಳಿ ಬ್ಲಾಕ್‍ನಲ್ಲಿ ನೂರಾರು ಬಡ ಕುಟುಂಬಗಳಿಗೆ 10 ದಿನಕ್ಕೆ ಬೇಕಾಗುವ ದಿನಸಿ ಪದಾರ್ಥಗಳು ಸೇರಿದಂತೆ ತರಕಾರಿಗಳನ್ನ ವಿತರಣೆ ಮಾಡಲಾಗಿದೆ.
Advertisement
ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿ.ಜಿ.ಜಯರಾಮ್, ಹುಸ್ಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಸೋಮಶೇಖರ್, ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಚಂದ್ರುಶೇಖರ್ ಹಾಗೂ ವಿದ್ಯಾರ್ಥಿ ಮಿತ್ರ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.