ಪಾಟ್ನಾ: ಬಿಹಾರದ ಶಾಲೆಯೊಂದರಲ್ಲಿ ಇಬ್ಬರು ಶಿಕ್ಷಕರು ಒಂದೇ ತರಗತಿಯ ಕೊಠಡಿಯಲ್ಲಿ ಏಕಕಾಲದಲ್ಲಿ ಮಕ್ಕಳಿಗೆ ಬೋರ್ಡ್ ಮೇಲೆ ಹಿಂದೂ ಹಾಗೂ ಉರ್ದು ಕಲಿಸುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತರಗತಿಯಲ್ಲಿ ಕೆಲವು ಮಕ್ಕಳು ಮಾತ್ರ ಪಾಠ ಕೇಳುತ್ತಿದ್ದರೆ. ಮತ್ತೆ ಕೆಲವು ಮಕ್ಕಳು ಗಲಾಟೆ ಮಾಡುತ್ತಿದ್ದು, ಬೋರ್ಡ್ ಎದುರು ಹಿರಿಯ ಶಿಕ್ಷಕಿಯೊಬ್ಬರು ಕುಳಿತುಕೊಂಡು ಮಕ್ಕಳನ್ನು ಗಲಾಟೆ ಮಾಡದಂತೆ ನೋಡಿಕೊಳ್ಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ – ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್
Advertisement
#WATCH | Bihar: Hindi & Urdu being taught on same blackboard in one classroom of a school in Katihar
Urdu Primary School was shifted to our school by Education Dept in 2017. Teachers teach both Hindi &Urdu in one classroom: Kumari Priyanka, Asst teacher of Adarsh Middle School pic.twitter.com/ZdkPE0j7tW
— ANI (@ANI) May 16, 2022
Advertisement
ಈ ಕುರಿತಂತೆ ಪ್ರತಿಕ್ರಿಯಿಸಿದ ಹಿಂದಿ ಶಿಕ್ಷಕಿ ಪ್ರಿಯಾಂಕಾ ಅವರು, 2017ರಲ್ಲಿ ಶಿಕ್ಷಣ ಇಲಾಖೆಯು ಉರ್ದು ಪ್ರಾಥಮಿಕ ಶಾಲೆಯನ್ನು ನಮ್ಮ ಶಾಲೆಗೆ ಸ್ಥಳಾಂತರಿಸಿದೆ. ನಮ್ಮ ಶಾಲೆಯಲ್ಲಿ ಸಾಕಷ್ಟು ಕೊಠಡಿಗಳಿಲ್ಲದ ಕಾರಣ, ಒಂದೇ ಬೋರ್ಡ್‍ನನ್ನು ಎರಡು ಭಾಗ ಮಾಡಿಕೊಂಡು ಹಿಂದಿ ಹಾಗೂ ಉರ್ದು ಶಿಕ್ಷಕರು ಏಕಕಾಲದಲ್ಲಿ ಮಕ್ಕಳಿಗೆ ಪಾಠ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ ಕೇಸ್‍ಗೆ ಟ್ವಿಸ್ಟ್ – ಮೊದಲು ಸಂಗೀತಾ ಹಲ್ಲೆ ಮಾಡಿದ್ದ ವೀಡಿಯೋ ವೈರಲ್
Advertisement
ಬಿಹಾರದ ಕತಿಹಾರ್‍ನಲ್ಲಿರುವ ಆದರ್ಶ್ ಮಿಡಲ್ ಸ್ಕೂಲ್ ಪರಿಸ್ಥಿಯ ಬಗ್ಗೆ ಮಾತನಾಡಿದ ಜಿಲ್ಲಾ ಶಿಕ್ಷಣಾಧಿಕಾರಿ ಕಾಮೇಶ್ವರ ಗುಪ್ತಾ ಅವರು, ಆದರ್ಶ ಮಿಡಲ್ ಸ್ಕೂಲ್‍ನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾದರೆ ಉರ್ದು ಪ್ರಾಥಮಿಕ ಶಾಲೆಗೆ ಒಂದು ಕೊಠಡಿ ನೀಡಲಾಗುವುದು. ಎಲ್ಲ ಮಕ್ಕಳಿಗೂ ಒಂದೇ ಕೊಠಡಿಯಲ್ಲಿ ಒಂದೇ ಬೋರ್ಡ್‍ನಲ್ಲಿ ಪಾಠ ಮಾಡುವುದು ಒಳ್ಳೆಯದಲ್ಲಿ ಎಂದಿದ್ದಾರೆ.