ಆತ್ಮ ನಿರ್ಭರ ಭಾರತ ಕಟ್ಟಲು ವಿದ್ಯಾರ್ಥಿಗಳು ಕೈಜೋಡಿಸಿ: ರಾಜ್ಯಪಾಲರು ಕರೆ

Public TV
3 Min Read
GOVERNOR THAWAR CHAND GEHLOT 6

ಬೆಂಗಳೂರು: ಭಾರತೀಯ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿಗಾಗಿ, ಕೃಷಿಯನ್ನು ಲಾಭದಾಯಕ ವ್ಯವಹಾರವನ್ನಾಗಿ ಮಾಡಲು ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸಲು ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರವು ಅನೇಕ ಯೋಜನೆಗಳನ್ನು ಮಾಡಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಹೇಳಿದರು.

GOVERNOR THAWAR CHAND GEHLOT 3

ನಗರದ ಜಿಕೆವಿಕೆ (GKVK) ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು 56ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತವು ಸ್ವಾವಲಂಬಿಯಾಗಲು ಮತ್ತು ಕೃಷಿ ಕ್ಷೇತ್ರದಲ್ಲಿ ಜಾಗತಿಕ ಶಕ್ತಿಯಾಗಲು ಕೃಷಿ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆಯ ಆಧುನೀಕರಣಕ್ಕೆ ಹೆಚ್ಚಿನ ಗಮನ ನೀಡಬೇಕಾಗಿದೆ. ಭಾರತ ಕೃಷಿ ಪ್ರಧಾನ ದೇಶ. ಭಾರತದ ಜನಸಂಖ್ಯೆಯ ಹೆಚ್ಚಿನ ಭಾಗವು ಕೃಷಿ ಮತ್ತು ಕೃಷಿ ಕೆಲಸ ಮಾಡುವ ಮೂಲಕ ತನ್ನ ಜೀವನವನ್ನು ಗಳಿಸುತ್ತದೆ. ಭಾರತೀಯ ಕೃಷಿಯು ಇನ್ನೂ ಮಳೆ-ಆಧಾರಿತವಾಗಿದೆ ಮತ್ತು ಒಟ್ಟು ಬೆಳೆ ಪ್ರದೇಶದ ಮೂರನೇ ಎರಡರಷ್ಟು ಪ್ರದೇಶದಲ್ಲಿ ಮಳೆ-ಆಧಾರಿತ ಕೃಷಿಯನ್ನು ಮಾಡಲಾಗುತ್ತದೆ ಎಂದರು.

GOVERNOR THAWAR CHAND GEHLOT 1

ಪ್ರತಿ ಹನಿಗೆ ಹೆಚ್ಚಿನ ಬೆಳೆ ಪಡೆಯಲು, ಕೃಷಿಯಲ್ಲಿನ ಇತ್ತೀಚಿನ ತಂತ್ರಜ್ಞಾನ, ನೈಸರ್ಗಿಕ ಕೃಷಿ, ದೇಶೀಯ ಬೀಜಗಳ ಸಂರಕ್ಷಣೆ ಇತ್ಯಾದಿಗಳ ಬಗ್ಗೆ ಹೆಚ್ಚು ವಿವರವಾದ ಸಂಶೋಧನೆ ಮಾಡುವ ಅವಶ್ಯಕತೆಯಿದೆ. ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ (Ram Nath Kovind) ಅವರೊಂದಿಗೆ ನಾನು ಇಸ್ರೇಲ್ ಗೆ ಭೇಟಿ ನೀಡಿ ಅಲ್ಲಿನ ಕೃಷಿ ಪದ್ಧತಿ ಬಗ್ಗೆ ಮಾಹಿತಿ ಪಡೆಯಲಾಗಿತ್ತು. ಇಸ್ರೇಲ್‍ನ ಹವಾಮಾನ ಮತ್ತು ಭೌಗೋಳಿಕತೆಯು ನೈಸರ್ಗಿಕವಾಗಿ ಕೃಷಿಗೆ ಸೂಕ್ತವಲ್ಲ, ಆದರೂ ಇಸ್ರೇಲ್ ಕೃಷಿ ತಂತ್ರಜ್ಞಾನಗಳಲ್ಲಿ ವಿಶ್ವ ನಾಯಕ. ಹನಿ ನೀರಾವರಿ ತಂತ್ರಜ್ಞಾನವನ್ನು ಬಳಸಿಕೊಂಡು ಇಸ್ರೇಲ್ (Israel) ಕೃಷಿಯ ಸ್ಮಾರ್ಟ್ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ನೀರು ಮತ್ತು ಹಣ ಎರಡನ್ನೂ ಉಳಿಸಿದೆ. ನೈಸರ್ಗಿಕ ಕೃಷಿಯು ಭೂಮಿಯ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ನೀರಿನ ಬಳಕೆ ಕಡಿಮೆಯಾಗಿದೆ, ರಾಸಾಯನಿಕ ಕೃಷಿಗೆ ಹೋಲಿಸಿದರೆ, ವೆಚ್ಚ ಕಡಿಮೆ ಮತ್ತು ಉತ್ಪಾದನೆಯು ಹೆಚ್ಚು ಎಂದು ಮಾಹಿತಿ ನೀಡಿದರು.

GOVERNOR THAWAR CHAND GEHLOT 4

ಕಳೆದ ವರ್ಷ ಈ ವಿಶ್ವವಿದ್ಯಾನಿಲಯವು ಕೃಷಿಯಲ್ಲಿ ಹೊಸ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ 68 ಎಂಒಯುಗಳಿಗೆ ಸಹಿ ಹಾಕಿದೆ ಹಾಗೂ 10 ಪೇಟೆಂಟ್‍ಗಳನ್ನು ಪಡೆಯಲಾಗಿರುವುದು ಹಾಗೂ ಈ ವಿಶ್ವವಿದ್ಯಾನಿಲಯದ ಪ್ರತಿಯೊಂದು ಕೃಷಿ ವಿಜ್ಞಾನ ಕೇಂದ್ರವು ಜಿಲ್ಲಾ ಮಟ್ಟದಲ್ಲಿ ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ತಲಾ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು. ಇದನ್ನೂ ಓದಿ: ಗಣಪತಿ ಡಿಜೆ – ನಿಮ್ಮ ಪುಂಗಿ ಇಲ್ಲಿ ನಡಿಯೋದಿಲ್ಲ, ನೀವು ಪುಂಗಿ ಊದಿದ್ರೆ, ನಾವು ನಮ್ಮ ಪುಂಗಿ ಊದುತ್ತೇವೆ: ಇನ್ಸ್‌ಪೆಕ್ಟರ್‌ ಅವಾಜ್

GOVERNOR THAWAR CHAND GEHLOT 5

ಈ ಘಟಿಕೋತ್ಸವದಲ್ಲಿ ಕೃಷಿ ವಿಜ್ಞಾನ ಕ್ಷೇತ್ರದಲ್ಲಿನ ಅತ್ಯುತ್ತಮ ಕೊಡುಗೆಗಾಗಿ ಎನ್.ಸಿ. ಪಟೇಲ್ ಅವರಿಗೆ ಗೌರವ ಪದವಿ ನೀಡಲಾಗಿದೆ. ಅವರ ಈ ಕೊಡುಗೆ ಸಮಾಜಕ್ಕಾಗಿ ನಿರಂತರವಾಗಿರಲಿ ಎಂದು ಆಶಿಸುತ್ತೇನೆ ಎಂದು ಹೇಳುವ ಮೂಲಕ ಗೌರವ ಪದವಿ ಸ್ವೀಕರಿಸಿದ ಎನ್.ಸಿ. ಪಟೇಲ್ ಹಾಗೂ ವಿವಿಧ ಪದವಿಗಳನ್ನು ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಅಲ್ಲದೆ ವಿದ್ಯಾರ್ಥಿಗಳು ಸ್ವಾಧೀನಪಡಿಸಿಕೊಂಡ ಜ್ಞಾನದೊಂದಿಗೆ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಮೂಲವಾಗುವುದರ ಜೊತೆಗೆ “ಆತ್ಮನಿರ್ಭರ್ ಭಾರತ್” ಕಟ್ಟುವಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

GOVERNOR THAWAR CHAND GEHLOT 2

ಘಟಿಕೋತ್ಸವದಲ್ಲಿ ಕೃಷಿ ವಿಜ್ಞಾನ ಪ್ರಗತಿಯ ಟ್ರಸ್ಟ್, ನವದೆಹಲಿ ಅಧ್ಯಕ್ಷರಾದ ಡಾ.ಆರ್ ಎಸ್ ಪರೋಡ ಅವರು ಮುಖ್ಯ ಅತಿಥಿಗಳ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಕೃಷಿ ಸಚಿವರಾದ ಶ್ರೀ ಬಿ.ಸಿ ಪಾಟೀಲ್, ಕುಲಪತಿ ಡಾ.ರಾಜೇಂದ್ರ ಪ್ರಸಾದ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *