ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರದಲ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹೆಣ್ಣು ಮಕ್ಕಳಿಗೆ ಕೇವಲ ಮುಟ್ಟಾದ್ರೆ ಮಾತ್ರ ಪ್ರತಿದಿನ ಸ್ನಾನ, ಇಲ್ಲವಾದ್ರೆ ವಾರಕ್ಕೊಮ್ಮೆ ಸ್ನಾನ ಮಾಡುವ ಪರಿಸ್ಥಿತಿಯಿದೆ.
300 ಮಕ್ಕಳಿರುವ ವಸತಿ ಶಾಲೆಗೆ ಪ್ರತಿದಿನ 3 ಟ್ಯಾಂಕರ್ ನೀರು ಪೂರೈಕೆ ಮಾಡಿಸ್ತಿದ್ದಾರೆ. ಆದ್ರೆ ಈ ನೀರು ಮಕ್ಕಳ ಮುಖ ತೊಳೆಯಲು ಸಾಕಾಗ್ತಿಲ್ಲ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ತಾವರಗೇರಾದಿಂದ 2 ಕಿಲೋಮೀಟರ್ ದೂರದಲ್ಲಿದ್ದು, ನಿರ್ಜನ ಪ್ರದೇಶವಾಗಿದೆ.
ಇಲ್ಲಿ ಓಡಾಡಲು ಸೂಕ್ತ ರಸ್ತೆಯೂ ಇಲ್ಲ. ಇನ್ನೂ ಇದೇ ಕ್ಯಾಂಪಸ್ ನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತಾತ್ಕಾಲಿಕವಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ ಆರಂಭವಾಗಿದ್ದು, ಹೆಚ್ಚುವರಿಯಾಗಿ 50 ವಿದ್ಯಾರ್ಥಿಗಳು ಸೇರಿಕೊಂಡಿದ್ದಾರೆ. ಹೀಗಾಗಿ ಶಾಲೆಯ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.