ಮಂಡ್ಯ: ಸರ್ಕಾರಿ ಶಾಲೆ ಶಿಕ್ಷಕ (Teacher) ರೊಬ್ಬರ ವರ್ಗಾವಣೆಗೆ ವಿದ್ಯಾರ್ಥಿಗಳು ಕಣ್ಣೀರಿಟ್ಟ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿಯಲ್ಲಿ ನಡೆದಿದೆ.
ಭೀಮನಹಳ್ಳಿಯ ಸರ್ಕಾರಿ ಪ್ರೌಢಶಾಲೆ (Bhimanahalli government School) ಯ ಪುಟ್ಟರಾಜು ವರ್ಗಾವಣೆ (Teacher Transfer) ಯಾದ ಮುಖ್ಯ ಶಿಕ್ಷಕ. ಇವರು ಹಲವು ವರ್ಷಗಳಿಂದ ಭೀಮನಹಳ್ಳಿಯ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಇದೀಗ ಅವರು ಮಂಡ್ಯದ ಡಯಟ್‍ಗೆ ವರ್ಗಾವಣೆಯಾಗಿದ್ದಾರೆ.
ಶಿಕ್ಷಕರ ವರ್ಗಾವಣೆಯಿಂದ ವಿದ್ಯಾರ್ಥಿಗಳು ಕಣ್ಣೀರಿಡುತ್ತಿದ್ದು, ಕಾಲಿಗೆ ಬಿದ್ದು ಶಾಲೆ ಬಿಟ್ಟು ಹೋಗಬೇಡಿ. ಇಲ್ಲೇ ಇರಿ ಮೇಷ್ಟ್ರೇ ಎಂದು ಬೇಡಿಕೊಂಡರು. ಮಕ್ಕಳ ಜೊತೆಗೆ ಸಹ ಶಿಕ್ಷಕರು ಹಾಗೂ ಪೋಷಕರು ಶಿಕ್ಷಕರ ಕಾಲಿಗೆ ಬಿದ್ದ ಪ್ರಸಂಗ ಕೂಡ ನಡೆದಿದೆ. ಇದನ್ನೂ ಓದಿ: ಗೋಲ್ಡ್ ರಿಕವರಿಗೆ ಬಂದ ತಮಿಳುನಾಡು ಪೊಲೀಸರು ಚಿಕ್ಕಬಳ್ಳಾಪುರದಲ್ಲಿ ಲಾಕ್