– ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ
ಬಾಗಲಕೋಟೆ: ಜಿಲ್ಲೆಯ ವಿದ್ಯಾಗಿರಿ ಬಳಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಶಾಲಾ ಮಕ್ಕಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್ ಪಾಟೀಲ್ ಭೇಟಿ ನೀಡಿ ಆರೋಗ್ಯಸ್ಥಿತಿ ವಿಚಾರಿಸಿದ್ದಾರೆ.
ಮಕ್ಕಳ ಆರೋಗ್ಯ ಹಾಗೂ ಚಿಕಿತ್ಸೆಯ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಈ ಅಪಘಾತದಲ್ಲಿ ಗಾಯಗೊಂಡ ಮಕ್ಕಳು ಶೀಘ್ರ ಗುಣಮುಖರಾಗ್ಲೀ ಎಂದು ದೇವರಲ್ಲಿ ಪಾರ್ಥಿಸಿದ್ರು. ಇದೇ ವೇಳೆ ಎಸ್.ಆರ್. ಪಾಟೀಲ್ ಮಕ್ಕಳ ವೈದ್ಯಕೀಯ ಖರ್ಚಿಗಾಗಿ ವೈಯಕ್ತಿಕವಾಗಿ 2 ಲಕ್ಷ ರೂ ಸಹಾಯಧನ ನೀಡಿದ್ರು. 6 ಜನ ಮಕ್ಕಳ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಲು ಸಿಎಂಗೆ ಮನವಿ ಮಾಡೋದಾಗಿ ಭರವಸೆ ನೀಡಿದ್ರು. ಇದನ್ನೂ ಓದಿ: ಟಂಟಂ ಹಿಂಬದಿಗೆ ಬೊಲೆರೊ ಡಿಕ್ಕಿ – ವಿದ್ಯಾರ್ಥಿಯ ಕೈ ಕಟ್, 6 ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ
Advertisement
Advertisement
ಇಂತಹ ಅಪಘಾತ ನಡೆಯದಂತೆ ಪೋಷಕರು ಹಾಗೂ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು. ಅಲ್ಲದೇ ಕರ್ತವ್ಯ ಪ್ರಜ್ಞೆ ಮರೆತು ವಾಹನ ಚಲಾಯಿಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.
Advertisement
ವಿದ್ಯಾಗಿರಿ ಬಳಿ ಟಂಟಂ ಹಾಗೂ ಬೊಲೆರೋ ವಾಹನದ ಮಧ್ಯೆ ಮಂಗಳವಾರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಕೆರೂಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.