ಗಾಂಧಿನಗರ: ಸೇತುವೆ ಮುರಿದು ಬಿದ್ದಿದ್ದ ಪರಿಣಾಮ ಬ್ಯಾರೇಜ್ ದಾಟಿ ಶಾಲೆಗೆ ಹೋಗಲು ಮಕ್ಕಳು ಹರಸಾಹಸ ಪಡುತ್ತಿರುವ ಪರಿಸ್ಥಿತಿ ಗುಜರಾತ್‍ನ ಗ್ರಾಮವೊಂದರಲ್ಲಿ ನಿರ್ಮಾಣವಾಗಿದೆ.
ಗುಜರಾತ್‍ನ ಖೇಡಾ ಜಿಲ್ಲೆಯ ನಾಯ್ಕಾ ಹಾಗೂ ಭೈರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬ್ಯಾರೆಜ್ ಸೇತುವೆ ಎರಡು ತಿಂಗಳ ಹಿಂದೆಯೇ ಮುರಿದು ಬಿದ್ದಿದೆ. ಮಕ್ಕಳು ಇದೇ ಸೇತುವೆ ಮೂಲಕವೇ ಶಾಲೆಗೆ ಹೋಗಬೇಕು. ಹೀಗಾಗಿ ನಿತ್ಯವೂ ಮಕ್ಕಳನ್ನು ಸೇತುವೆ ದಾಟಿಸಲು ಪೋಷಕರು, ಇಲ್ಲವೇ ಸ್ಥಳೀಯರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ನಾಯ್ಕಾ ಹಾಗೂ ಭೈರೆ ಗ್ರಾಮಕ್ಕೆ ಸಂಪರ್ಕ ಸಲ್ಪಿಸಲು ಮತ್ತೊಂದು ದಾರಿಯಿದೆ. ಅದು 10 ಕಿ.ಮೀ. ಸುತ್ತುವರಿದು ಬರಬೇಕಾಗುತ್ತದೆ. ಸೇತುವೆ ಮೂಲಕ ಹೋದರೆ ಕೇವಲ 1 ಕಿ.ಮೀ. ಅಷ್ಟೇ. ಹೀಗಾಗಿ ಇದೇ ಬ್ಯಾರೇಜ್‍ನ ಪ್ರತಿ ಕಟ್ಟೆಯ ಮೇಲೆ ಒಬ್ಬರು ನಿಂತು, ಮಕ್ಕಳನ್ನು ಹಿಡಿದು ಕಾಲುವೆ ದಾಟಿಸುತ್ತಿದ್ದಾರೆ. ಜೀವ ಭೀತಿಯಲ್ಲಿ ಕಳೆದ ಎರಡು ತಿಂಗಳಿನಿಂದ ಈ ಯಾತನೆಯನ್ನು ಗ್ರಾಮಸ್ಥರು ಪಡುತ್ತಿದ್ದಾರೆ.
Advertisement
ಕೆಲವೇ ದಿನಗಳಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಮಳೆಯಿಂದಾಗಿ ಕಾಮಗಾರಿ ಆರಂಭಗೊಳ್ಳಲು ತಡವಾಗುತ್ತಿದೆ ಎಂದು ಮಳೆಯಿಂದಾಗಿ ಜಿಲ್ಲಾಧಿಕಾರಿ ಐ.ಕೆ.ಪಟೇಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
ಕೈಕೈ ಹಿಡಿದು ಮಕ್ಕಳು ಸೇತುವೆ ದಾಟುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
https://youtu.be/7Ma7zRL7538