ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಕಾವಲು’ (Kavalu) ಚಿತ್ರದ ಶೀರ್ಷಿಕೆಯನ್ನು ಶಿಕ್ಷಣ ಪಂಡಿತರುಗಳು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಚಿತ್ರಕ್ಕೆ ’ಕೊನೆವರೆಗೂ’ ಅಂತ ಅಡಿಬರಹವಿದೆ. ಪರಂಪರಾ ಸ್ಟುಡಿಯೋಸ್ ಮತ್ತು ಇನ್ಸ್‌ಪೈರ್ ಫಿಲಿಂ ಇನ್ಸ್ಟಿಟ್ಯೂಟ್ ಇವರುಗಳು ಸಿನಿಮಾಸಕ್ತರಿಗೆ ತರಬೇತಿ ನೀಡುವ ಜತೆಗೆ ನಿರ್ಮಾಪಕರೊಂದಿಗೆ ಸೇರಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ.
Advertisement
ಸಂಸ್ಥೆಯು ’ಕರ್ನಾಟಕ ವಿದ್ಯಾ ಸ್ಪೂರ್ತಿ’ ಅಡಿಯಲ್ಲಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಇದರಲ್ಲಿ 18000 ಜನರ ಪೈಕಿ, 8000 ಆಕಾಂಕ್ಷಿಗಳು ಲಿಖಿತ ಪರೀಕ್ಷೆ ಬರೆದಿದ್ದು, ನಂತರ 340 ಜನರು ಆಡಿಯೋ ಮುಖಾಂತರ, ತದನಂತರ 27 ಜನರನ್ನು ವಿಡಿಯೋ ಕಾಲ್ ಮೂಲಕ ಸಂದರ್ಶನ ನಡೆಸಲಾಗಿತ್ತು. ಅಂತಿಮವಾಗಿ ಪ್ರಥಮ ಬಹುಮಾನ 50000 ದ್ವಿತೀಯ 20000 ಮತ್ತು ತೃತೀಯ 10000 ಹೀಗೆ ಮೂರು ಯುವ ಪ್ರತಿಭೆಗಳು ಸೇರಿದಂತೆ, ವಿಶೇಷವೆಂದು ಇಬ್ಬರು ಹಾಗೂ ವಿರೋಚಿತ ಆಯ್ಕೆ ಎಂದು 13 ಜನರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್
Advertisement
Advertisement
ಇಂಚರ ಎಂಟರ್‌ಪ್ರೈಸಸ್ ಮುಖಾಂತರ ಉದ್ಯಮಿ ಆರ್.ವಾಸುದೇವರಡ್ಡಿ (R. Vasudevaraddy) , ಸವಿತಾರೆಡ್ಡಿ ’ಕಾವಲು’ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಹಲವು ವರ್ಷಗಳ ಕಾಲ ಕಿರುತೆರೆ, ಸಹ ನಿರ್ದೇಶಕನಾಗಿ ಚಿತ್ರಗಳಿಗೆ ಕೆಲಸ ಮಾಡಿದ ಅನುಭವ ಇರುವ ಜಗ್ಗಿ ಮುಡೇನಹಳ್ಳಿ (Jaggi Mudenahalli) ರಚನೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರೀತಿ, ಶಿಕ್ಷಣ, ಒಳಸುಳಿವು, ಕೌತುಕತೆ ಇರುವ ಭಾವನಾತ್ಮಕ ಕಥೆಯನ್ನು ಹೊಂದಿದೆ.
Advertisement
ರಣ್ವಿತ್ ನಾಯಕ (Ranvit). ಸಾತ್ವಿಕ ಓಂಪ್ರಕಾಶ್ ರಾವ್, ಪವಿತ್ರಾ. ಬಿ. ನಾಯಕ್ ನಾಯಕಿಯರು. ಇವರೊಂದಿಗೆ ಪ್ರಮೋದ್ ಶೆಟ್ಟಿ, ಮಜಾಭಾರತ್ ಕಾರ್ತಿಕ್, ಸುಷ್ಮಿತಾ ಮುಂತಾದವರು ನಟಿಸಿದ್ದಾರೆ. ಚಂದ್ರಕಾಂತ್-ತಪಸ್ವಿ ಸಾಹಿತ್ಯದ ನಾಲ್ಕು ಹಾಡುಗಳಿಗೆ ಬಿ.ಆರ್.ಸುರೇಂದ್ರನಾಥ್ ಸಂಗೀತ, ಮಧುಸುಗುಟ ಛಾಯಾಗ್ರಹಣ, ಆಕಾಶ್‌ಮಹೇಂದ್ರಕರ್ ಸಂಕಲನವಿದೆ. ಕಳಸ, ಹಾರೋಹಳ್ಳಿ, ಕನಕಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
Web Stories