– ಇದು ಗಾಂಧಿ ಬಗ್ಗೆ ಯುವಪೀಳಿಗೆಯ ಉತ್ತರ
ಬೆಂಗಳೂರು: ಇಂದು ರಾಷ್ಟ್ರಪಿತ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಅವರ 150ನೇ ಜನ್ಮದಿನ. ನಮ್ಮ ದೇಶದಲ್ಲಿ ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಣೆ ಮಾಡುತ್ತಾ ಬಂದಿದ್ದೇವೆ. ಆದರೆ ಇಂದಿನ ಯುವ ಪೀಳಿಗೆಯವರಲ್ಲಿ ಗಾಂಧೀಜಿ ಅವರ ಬಗ್ಗೆ ತಿಳಿದುಕೊಂಡಿರುವ ಜ್ಞಾನ ನೋಡಿದರೆ ಫುಲ್ ಶಾಕ್ ಆಗುತ್ತೆ.
Advertisement
ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಅಹಿಂಸಾ ತತ್ವದ ಮೂಲಕ ಇಡೀ ವಿಶ್ವವನ್ನೇ ಭಾರತದ ಕಡೆ ನೋಡುವಂತೆ ಮಾಡಿದ ಭಾರತದ ಶ್ರೇಷ್ಠ ನಾಯಕ ಗಾಂಧೀಜಿ ಅವರ ಬಗ್ಗೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶ್ನಿಸಿದ್ದಾಗ ಕೆಲವು ವಿದ್ಯಾರ್ಥಿ ತಪ್ಪುತಪ್ಪಾಗಿ ಉತ್ತರ ನೀಡಿದ್ದಾರೆ.
Advertisement
Advertisement
ಗಾಂಧೀಜಿ ಅವರ ತಂದೆಯ ಹೆಸರನ್ನು ಕೇಳಿದರೆ, ಕೆಲವು ವಿದ್ಯಾರ್ಥಿಗಳು ಮನ್‍ಮೋಹನ್ ಸಿಂಗ್, ಪೂರ್ಣಚಂದ್ ಗಾಂಧಿ ಎಂದು ಉತ್ತರಿಸಿದ್ದಾರೆ. ತಾಯಿ ಹೆಸರು ಕೇಳಿದರೆ ಕಸ್ತೂರಿ ಬಾ ಎಂದು ಉತ್ತರಿಸಿದ್ದಾರೆ. ಮತ್ತೆ ಕೆಲವು ವಿದ್ಯಾರ್ಥಿಗಳು ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
Advertisement
ಗಾಂಧೀಜಿ ಬಗ್ಗೆ ಪ್ರಶ್ನೆ ಕೇಳಿದರೆ ಉತ್ತರ ಕೊಡುವುದಕ್ಕೆ ಕೆಲ ವಿದ್ಯಾರ್ಥಿಗಳು ಪ್ರಯತ್ನ ಮಾಡಿದರೆ, ಮತ್ತೆ ಕೆಲ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುತ್ತಿದ್ದಾಗಲೇ ಯಾರೋ ಭಯೋತ್ಪಾದಕರನ್ನು ನೋಡಿದ ಹಾಗೆ ಓಡಿ ಹೋಗಿದ್ದಾರೆ. ಇನ್ನೂ ಕೆಲವೇ ಕೆಲವು ವಿದ್ಯಾರ್ಥಿಗಳು ಮಹಾತ್ಮ ಗಾಂಧಿಜೀಯ ಬಗ್ಗೆ ಸರಿಯಾದ ಉತ್ತರ ನೀಡಿದ್ದಾರೆ.
ಕಾಲೇಜು ವಿದ್ಯಾರ್ಥಿಗಳಿಗಿಂತ ಶಾಲಾ ಮಕ್ಕಳೇ ಗಾಂಧೀಜಿ ಅವರ ಬಗ್ಗೆ ಮಾತನಾಡಿದ್ದಾರೆ. ಗಾಂಧೀಜಿಯ ಬಗ್ಗೆ ಪುಟಾಣಿ ಶಾಲಾ ಮಕ್ಕಳು ತಮ್ಮಗೆ ಗೊತ್ತಿರುವಷ್ಟು ಹೇಳುವ ಪ್ರಯತ್ನ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv