ಧಾರವಾಡ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಫ್ರಾನ್ಸ್‌ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳ ಗೋಳಾಟ ಆರಂಭವಾಗಿದೆ. ಫ್ರಾನ್ಸ್‌ನಲ್ಲಿ ಮೀತಿ ಮೀರಿ ಕೊರೊನಾ ಕೇಸ್ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೀತಿಯಿಂದ ವಿಡಿಯೋ ಮಾಡಿ ಕಳುಹಿಸಿದ್ದು, ನಮ್ಮನ್ನ ವಾಪಸ್ ಕರೆಸಿಕೊಳ್ಳಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಧಾರವಾಡದ ಕೇದಾರ, ಸಚ್ಚಿದಾನಂದ ಹಾಗೂ ಬೆಂಗಳೂರಿನ ಪೂಜಾ ಮತ್ತು ತೇಜಸ್ ನಾಲ್ವರು ವಿದ್ಯಾರ್ಥಿಗಳು ಈ ವಿಡಿಯೋ ಮಾಡಿ ಕಳುಹಿಸಿದ್ದಾರೆ. ನಾವು ಕರ್ನಾಟಕದ ವಿದ್ಯಾರ್ಥಿಗಳು, ವ್ಯಾಸಂಗಕ್ಕಾಗಿ ಫ್ರಾನ್ಸ್‌ಗೆ ಬಂದಿದ್ದೆವು. ಆದರೆ ಇಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಾವು ಇಲ್ಲಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳು ಕ್ಯಾನ್ಸಲ್ ಆಗಿದೆ. ಭಾರತೀಯ ರಾಯಭಾರಿ ಕಚೇರಿಗೂ ಮನವಿ ಮಾಡಿಕೊಂಡಿದ್ದೇವೆ. ಆದರೆ ಯಾವುದೇ ರೀತಿ ಪ್ರಯೋಜನವಾಗಿಲ್ಲ. ಹೇಗಾದರೂ ಮಾಡಿ ನಮ್ಮನ್ನ ತವರಿಗೆ ಕಳುಹಿಸಿಕೊಡಿ ಎಂದು ವಿದ್ಯಾರ್ಥಿಗಳು ತಮ್ಮ ಅಳನ್ನು ತೋಡಿಕೊಂಡಿದ್ದಾರೆ.
Advertisement
Advertisement
ಕಳೆದ ಒಂದು ತಿಂಗಳಿಂದ ಇಡೀ ಫ್ರಾನ್ಸ್ ದೇಶ ಸಂಪೂರ್ಣ ಲಾಕ್‍ಡೌನ್ ಆಗಿದೆ. ವಿದ್ಯಾರ್ಥಿಗಳು ಫ್ಯಾರಿಸ್‍ನಿಂದ 300ಕೀ.ಮೀ ದೂರದಲ್ಲಿರುವ ಫ್ರಾನ್ಸ್ ಸಿಟಿಯೊಂದರಲ್ಲಿ ಲಾಕ್ ಆಗಿದ್ದಾರೆ. ಇವರಿರುವ ಪ್ರದೇಶದಲ್ಲಿ ಸುಮಾರು 20 ಕನ್ನಡಿಗ ವಿದ್ಯಾರ್ಥಿಗಳು ಲಾಕ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಫ್ರಾನ್ಸ್‌ನಲ್ಲಿ ಸುಮಾರು 500ಕ್ಕೂ ಹೆಚ್ಚಿನ ಮಂದಿ ಭಾರತೀಯ ಮೂಲದ ವಿದ್ಯಾರ್ಥಿಗಳಿದ್ದಾರೆ. ಫ್ರಾನ್ಸ್‌ನಲ್ಲಿಯೇ 120ಕ್ಕೂ ಹೆಚ್ಚು ಕನ್ನಡಿಗ ವಿದ್ಯಾರ್ಥಿಗಳು ಇದ್ದಾರೆ.
Advertisement
ಭಾರತಕ್ಕೆ ನಮ್ಮನ್ನು ಕರೆದುಕೊಂಡು ಹೋದರೆ ನಾವು 14 ದಿನ ಹೊಮ್ ಕ್ವಾರಂಟೈನ್‍ನಲ್ಲಿರುವುದಕ್ಕೂ ತಯಾರಿದ್ದೇವೆ ಎಂದು ಮನವಿ ಮಾಡಿಕೊಂಡಿದ್ದಾರೆ. ಈಗ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ವಿದ್ಯಾರ್ಥಿಗಳ ಕುಟುಂಬದವರು ಸಂಪರ್ಕ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ.