-ಪಡ್ಡೆ ಹುಡುಗರ ಗ್ಯಾಂಗ್ ಹಾಜರ್
ದಾವಣಗೆರೆ: ಕಾಲೇಜಿಗೆ ಚಕ್ಕರ್ ಹಾಕಿ ನಗರದ ಕೆಲ ವಿದ್ಯಾರ್ಥಿಗಳು ಪಾರ್ಕಿನಲ್ಲಿ ಕುಳಿತು ಅಸಭ್ಯವಾಗಿ ವರ್ತಿಸಿದ್ದಾರೆ.
ನಗರದ ವಿಶ್ವೇಶ್ವರಯ್ಯ ಪಾರ್ಕ್, ವಿದ್ಯಾನಗರ ಪಾರ್ಕ್ ಸೇರಿದಂತೆ ಪ್ರಮುಖ ಪಾರ್ಕ್ ತುಂಬಾ ಪ್ರೇಮ ಪಕ್ಷಿಗಳು ಗರಿ ಬಿಚ್ಚಿ ಹಾರಾಡುತ್ತಿರುತ್ತವೆ. ಅದರಲ್ಲೂ ವಾಯು ವಿಹಾರಕ್ಕೆ ಎಂದು ನಗರದ ಜನರು ಪಾರ್ಕ್ ಗಳಿಗೆ ಹೋದರೆ ಸಾಕು ಮುಜುಗರಪಡುವಂತ ಸನ್ನಿವೇಶಗಳೇ ಹೆಚ್ಚಿರುತ್ತವೆ. ಕಾಲೇಜು ಯುವಕ- ಯುವತಿಯರು ಪಾರ್ಕಿನ ಒಳಗೆ ಕೂತು ಪ್ರಪಂಚವನ್ನೇ ಮರೆತಿರುತ್ತಾರೆ. ಆದರೆ ಇದನ್ನು ನೋಡಲು ಪಡ್ಡೆ ಹುಡುಗರ ಗ್ಯಾಂಗ್ಗಳು ಹಾಜರು ಇರುತ್ತವೆ. ಪಾರ್ಕಿನಲ್ಲಿ ನಡೆಯುವ ಇಂತಹ ಅಸಭ್ಯ ಘಟನೆಗಳಿಗೆ ಪೊಲೀಸರು ಕಡಿವಾಣ ಹಾಕಬೇಕು ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಯಾರು ಕೂಡ ಕುಟುಂಬ ಸಮೇತರಾಗಿ ಕಾಲು ಇಡಲು ಕೂಡ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಇದನ್ನೂ ಓದಿ: ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಪಾರ್ಕಿನೊಳಗೆ ಮೋಜು ಮಸ್ತಿ
ಪಾರ್ಕಿನಲ್ಲಿ ಬಹುತೇಕ ಪಿಯುಸಿ ಹಾಗೂ ಡಿಗ್ರಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿದ್ದು, ಕ್ಲಾಸಿಗೆ ಚಕ್ಕರ್ ಹಾಕಿ ಪಾರ್ಕ್ ಪೊದೆಗಳಲ್ಲಿ ಕೂತಿರುತ್ತಾರೆ. ಕೆಲವೊಮ್ಮೆ ಕುಟುಂಬದ ಜೊತೆ ಹೋಗುವುದಕ್ಕೂ ಮುಜುಗರವಾಗುವಂತಹ ಸನ್ನಿವೇಶಗಳು ಸೃಷ್ಟಿ ಆಗಿರುತ್ತವೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರೆ ಇದುವರೆಗೂ ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ನಮ್ಮ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಎಲ್ಲಾ ಕಡೆಗಳಲ್ಲಿ ಸೂಕ್ತವಾದ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.