ಬೆಳಗಾವಿ: ಪಾಯ ಅಗೆದ ಮೇಲೆ ಬಿಲ್ಡಿಂಗ್ ಸರಿಯಾಗಿ ನಿಲ್ಲಬೇಕು ಅಂದರೆ ಮೊದಲು ಫಿಲ್ಲರ್ ಹಾಕಿ ನಂತರ ಕಟ್ಟಡ ಕಟ್ಟೋಕೆ ಆರಂಭಿಸುತ್ತಾರೆ. ಆದರೆ ಇಲ್ಲೊಂದು ಸರ್ಕಾರಿ ಕಟ್ಟಡಕ್ಕೆ ಕಟ್ಟಡ ಕಟ್ಟಿ ಒಂದು ವರ್ಷದ ಬಳಿಕ ಪಿಲ್ಲರ್ ಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದ ಶಾಲೆಯ ಕಟ್ಟಡ ಕಟ್ಟಿದ ವರ್ಷದ ಬಳಿಕ ಪಿಲ್ಲರ್ ಅಳವಡಿಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ. 2016ರಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ಕೆರೂರು ಗ್ರಾಮಕ್ಕೆ ಹೊಸ ಸರ್ಕಾರಿ ಫ್ರೌಡ ಶಾಲಾ ಕಟ್ಟಡ ಮಂಜೂರಾಗಿತ್ತು. ಕಟ್ಟಡ ಕಾಮಗಾರಿಯನ್ನು ಗುತ್ತಿಗೆ ಪಡೆದ ಕಂಪನಿ ತರಾತುರಿಯಲ್ಲಿ ಪ್ರಾರಂಭಮಾಡಿ ಕೆಲಸ ಮುಗಿಸಿತ್ತು. ಹೀಗಾಗಿ ಶಾಲೆಯ ಕಟ್ಟಡ ವಾಲಿದ್ದು ಬೀಳುವ ಸ್ಥಿತಿಗೆ ತಲುಪಿದೆ.
Advertisement
Advertisement
ಈ ಶಾಲೆಯಲ್ಲಿ 438 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ನಿತ್ಯ ಜೀವ ಭಯದಲ್ಲೇ ಪಾಠ ಕಲಿಯುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನ ಕೇಳಿದರೆ ಬಿಲ್ಡಿಂಗ್ ಕಾಮಗಾರಿಗೆ ವೆಚ್ಚವಾದ ಮೊತ್ತ ಮತ್ತು ಯಾರಿಗೆ ಟೆಂಡರ್ ಕೊಡಲಾಗಿತ್ತು ಎಂಬುದು ನಮಗೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ.
Advertisement
ಸದ್ಯ ಕಟ್ಟಡ ಬೀಳದಂತೆ ಸೈಡಿಗೆ ಪಿಲ್ಲರ್ ಅಳವಡಿಸಲಾಗಿದೆ. ಆದರೂ ವಿದ್ಯಾರ್ಥಿಗಳಲ್ಲಿ ಆತಂಕ. ಇನ್ನಾದ್ರೂ ಕಳಪೆ ಕಾಮಗಾರಿ ಮಾಡಿ ಕೈ ತೊಳೆದುಕೊಂಡ ಗುತ್ತಿಗೆದಾರರ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹಿಸುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv