ಬಾಗಲಕೋಟೆ: ಕೇಕ್ ಕಟ್ ಮಾಡಿ, ಪಾರ್ಟಿ ಮಾಡಿ, ಡ್ಯಾನ್ಸ್ ಮಾಡುವ ಮೂಲಕ ಹೊಸ ವರ್ಷಕ್ಕೆ ವೆಲ್‍ಕಮ್ ಮಾಡುವುದು ಸಾಮಾನ್ಯವಾಗಿ ಕಾಣುತ್ತೇವೆ. ಆದರೆ ಶಾಲಾ ಮಕ್ಕಳು ತಮ್ಮ ತಾಯಂದಿಯರಿಗೆ ಪಾದ ಪೂಜೆ ಮಾಡಿಸುವ ಮೂಲಕ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಗಮನ ಸೆಳೆದಿದೆ.
ಹಿಪ್ಪರಗಿ ಗ್ರಾಮದ ಶ್ರೀ ಕುಮಾರೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ಪೂರ್ವ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿಯವರು ಹೊಸ ವರ್ಷದ ಆಚರಣೆ ನಿಮಿತ್ಯ ಶಾಲೆಯಲ್ಲಿ ಮಕ್ಕಳ ತಾಯಂದಿಯರಿಗೆ ಕರೆಸಿಕೊಂಡು, ಮಂತ್ರ ಪಠಣದಿಂದ ಶಾಸ್ತ್ರೋಕ್ತವಾಗಿ ಪಾದ ಪೂಜೆ ಮಾಡಿಸಿದರು.
Advertisement
Advertisement
ಪಂಚಾಚಾರ್ಯ ಮಠದ ಶ್ರೀಗಳಾದ ಮಹಾಂತೇಶ್ವರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಮಕ್ಕಳು ತಮ್ಮ ತಾಯಂದಿರ ಪಾದ ಪೂಜೆಯನ್ನು ಮಾಡಿದರು. ಈ ಮೂಲಕ ಸಂಪ್ರದಾಯ ಪದ್ಧತಿ ಮತ್ತು ತಾಯಿಯೇ ಮೊದಲ ಗುರು ಹಿನ್ನೆಲೆ, ಈ ರೀತಿಯ ಸಂಸ್ಕೃತ ಬೆಳೆಸಿ ಮಕ್ಕಳಿಗೆ ಪಾಶ್ಚಾತ್ಯ ಸಂಸ್ಕೃತಿಯಿಂದ ದೂರು ಇರಿಸುವ ಉದ್ದೇಶವಾಗಿದೆ.
Advertisement
ಈಗ ಹೊಸ ವರ್ಷ ಎಂದರೆ ಕೇವಲ ಮೋಜು, ಮಸ್ತಿಯಿಂದ ಆಚರಣೆ ಮಾಡುತ್ತಿರುವುದು ಸಾಮಾನ್ಯ. ಆದರೆ ಗ್ರಾಮೀಣ ಭಾಗದಲ್ಲಿ ಮಕ್ಕಳನ್ನು ಇಂತಹ ಸಂಸ್ಕೃತಿ ಬೆಳೆಸುತ್ತಿರುವುದು ಆಡಳಿತ ಶಾಲಾ ಮಂಡಳಿಯ ಕಾರ್ಯವು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.