ಕಲಬುರಗಿ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ವಸತಿಗಾಗಿ ಸರ್ಕಾರ ಹಾಸ್ಟೆಲ್‍ಗಳನ್ನು ಸಹ ನಿರ್ಮಿಸಿದೆ. ಆದ್ರೆ ಕಲಬುರಗಿಯ ಬಿಸಿಎಂ ಹಾಸ್ಟೆಲ್‍ನಲ್ಲಿ ದೆವ್ವಗಳಿವೆ ಅಂತ ವಿದ್ಯಾರ್ಥಿಗಳು ರಾತ್ರಿಯಾದ್ರೆ ಸಾಕು ವಸತಿ ನಿಲಯದಲ್ಲಿ ಮಲಗುತ್ತಿಲ್ಲ.
Advertisement
ಈ ಮಕ್ಕಳ ಮುಖದಲ್ಲಿ ಅದೇನೋ ಅವ್ಯಕ್ತ ಭಯ, ಆತಂಕ. ಇವರೆಲ್ಲ ಕಲಬುರಗಿ ತಾಲೂಕಿನ ಸೊಂತ ಗ್ರಾಮದ ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿಗಳು. ಅಸಲಿಗೆ ಇವರ ಭಯವೇನೆಂದ್ರೆ ಈ ವಸತಿ ನಿಲಯದಲ್ಲಿ ರಾತ್ರಿಯಾದ್ರೆ ಸಾಕು ದೆವ್ವಗಳು ಬಂದು ನೆಲೆಸುತ್ತವಂತೆ. ಹಗಲಲ್ಲಿ ಜೊತೆಯಾಗಿ ಊಟ ಮಾಡಿ ರಾತ್ರಿ 7 ಗಂಟೆಯೊಳಗೆ ವಿದ್ಯಾರ್ಥಿಗಳು ಹಾಸ್ಟೆಲ್‍ನಲ್ಲಿ ವಾಸ್ತವ್ಯ ಮಾಡದೇ ಅವರವರ ಮನೆಗೆ ತೆರಳುತ್ತಾರೆ. ಇದು ಇಂದು ನಿನ್ನೆಯದಲ್ಲ ಕಳೆದ 10 ವರ್ಷಗಳಿಂದ ಇಂತಹ ಭಯ ವಿದ್ಯಾರ್ಥಿಗಳಲ್ಲಿದೆ.
Advertisement
Advertisement
ಹೇಳಿಕೇಳಿ ಈ ವಸತಿ ಶಾಲೆಯನ್ನ ಸ್ಮಶಾನದ ಆವಣರದಲ್ಲೇ ನಿರ್ಮಾಣ ಮಾಡಿದ್ದಾರೆ. ನೀರವ ಎನಿಸುವ ವಾತಾವರಣದಲ್ಲಿ ಅಲ್ಲಲ್ಲಿ ಹಾಳುಬಿದ್ದ ಕಟ್ಟಡ, ಸಮಾಧಿ, ನಿರ್ಜನ ಪ್ರದೇಶ. ಒಂಥರಾ ಭಯ ಹುಟ್ಟಿಸುವಂತೆಯೇ ಇದೆ. ದೆವ್ವದ ಭೀತಿಯಿಂದ ಅಕ್ಕ-ಪಕ್ಕದ ಗ್ರಾಮದ ಜನ ತಮ್ಮ ಮಕ್ಕಳನ್ನು ವಸತಿ ನಿಲಯದಲ್ಲಿ ಬಿಡಲು ಹಿಂಜರಿಯುತ್ತಿದ್ದಾರೆ. ಈ ಕುರಿತು ವಸತಿ ನಿಲಯದ ಸಿಬ್ಬಂದಿಯನ್ನು ಕೇಳಿದ್ರೆ, ಮಕ್ಕಳ ಪೋಷಕರೇ ಹೆದರುತ್ತಾರೆ ಏನು ಮಾಡೋದು ಹೇಳಿ ಅಂತಾರೆ.
Advertisement
ಸದ್ಯ ಈ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಸೌಕರ್ಯಗಳನ್ನು ಬಿಸಿಎಂ ಇಲಾಖೆ ನೀಡಿದೆ. ಆದ್ರೆ ದೆವ್ವದ ಭಯದಿಂದ ಇಲ್ಲಿ ಯಾವ ವಿದ್ಯಾರ್ಥಿಗಳು ವಾಸ ಮಾಡ್ತಿಲ್ಲ ಅನ್ನೋದೇ ವಿಪರ್ಯಾಸ.