ಶಿವಮೊಗ್ಗ: ಭದ್ರವಾತಿ (Bhadravati) ತಾಲೂಕಿನ ಅರಳಹಳ್ಳಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ (School) 10ಕ್ಕೂ ಹೆಚ್ಚು ಮಕ್ಕಳಲ್ಲಿ (Students) ವಾಂತಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಕೂಡಲೇ ಮಕ್ಕಳನ್ನು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ವಸ್ಥರಾದವರಲ್ಲಿ 6ನೇ ತರಗತಿ ಮಕ್ಕಳೇ ಹೆಚ್ಚಾಗಿದ್ದಾರೆ. ಇನ್ನೂ ಊಟ ಆದ ಮೇಲೆ ನೀಡಿದ ಟಾನಿಕ್ ನಿಂದ ಮಕ್ಕಳು ಅಸ್ವಸ್ಥರಾಗದ್ದಾರೆ ಎಂದು ಹೇಳಲಾಗುತ್ತಿದೆ. ಊಟದ ಮೇಲೆ ಮಕ್ಕಳಿಗೆ ರಕ್ತ ಅಭಿವೃದ್ಧಿಗಾಗಿ ಎಫ್ ಎಕ್ಸ್ ಟಾನಿಕ್ ನೀಡಬೇಕೆಂದು ಸರ್ಕಾರದ ಆದೇಶವಿದೆ. ಸರ್ಕಾರಿ ಆದೇಶದ ಹಿನ್ನಲೆಯಲ್ಲಿ ಶಾಲೆಯಲ್ಲಿ ಈ ಟಾನಿಕ್ ನೀಡಲಾಗುತ್ತದೆ. ಇದನ್ನೂ ಓದಿ: ಮುಂಡಗೋಡು: ಬಿಸಿ ಊಟ ಸೇವಿಸಿ 22 ವಿದ್ಯಾರ್ಥಿಗಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು
ಈ ಬಗ್ಗೆ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಇಲಾಖೆ ಸ್ಪಷ್ಟಪಡಿಸಬೇಕಿದೆ. ಅಸ್ವಸ್ಥಗೊಂಡ ಮಕ್ಕಳಿಗೆ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ಚಿಕನ್ ಬೇಯಿಸಲು ಹಚ್ಚಿದ ಒಲೆಯಿಂದ ರೂಮ್ ತುಂಬಾ ಆವರಿಸಿದ ಹೊಗೆ – ಓರ್ವ ಸಾವು, 6 ಮಂದಿ ಅಸ್ವಸ್ಥ

