ಬೀದರ್: ಶಿಕ್ಷಕರನ್ನು ವಿದ್ಯಾರ್ಥಿಗಳು ಹೆಚ್ಚು ಹಚ್ಚಿಕೊಂಡಿರುತ್ತಾರೆ. ಅದರಲ್ಲೂ ತಮ್ಮ ಅಚ್ಚುಮೆಚ್ಚಿನ ಶಿಕ್ಷಕರು ಶಾಲೆ ಬಿಟ್ಟುಹೋಗುತ್ತಾರೆ ಎಂದರೆ ಮಕ್ಕಳಿಗೆ ಬೇಸರವಾಗುತ್ತೆ. ಆದರೆ ಬೀದರ್‌ನಲ್ಲಿ ವರ್ಗಾವಣೆಯಾಗಿ ಶಾಲೆ ಬಿಟ್ಟು ಹೋಗುತ್ತಿದ್ದ ಶಿಕ್ಷಕರಿಗಾಗಿ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಿಟ್ಟು ಹೋಗ್ಬೇಡಿ ಸಾರ್ ಎಂದು ಶಿಕ್ಷಕನನ್ನು ಬಿಗಿದಪ್ಪಿ ಮಕ್ಕಳು ಕಣ್ಣೀರಿಟ್ಟಿದ್ದಾರೆ.
Advertisement
ಹೌದು. ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಕುಮಾರ ಚಿಂಚೋಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಅತ್ತಿದ್ದಾರೆ. ಈ ಶಾಲೆಯ ಕನ್ನಡ ಮಾಧ್ಯಮ ಶಿಕ್ಷಕ ಅನಿಲ್ ರಾಠೋಡ್ ಅವರ ಮೇಲೆ ಮಕ್ಕಳು ತೋರಿದ ಪ್ರೀತಿ ನೋಡಿ ಇತರೆ ಶಿಕ್ಷಕರೂ ಕೂಡ ಭಾವುಕರಾಗಿದ್ದಾರೆ. ಶಾಲೆಯಿಂದ ವರ್ಗಾವಣೆಗೊಂಡು ತೆರಳುತ್ತಿದ್ದ ಅನಿಲ್ ಅವರಿಗೆ ಬೀಳ್ಕೊಡುವಾಗ ವಿದ್ಯಾರ್ಥಿಗಳು ಸಾಮೂಹಿಕವಾಗಿ ಬಿಕ್ಕಿ, ಬಿಕ್ಕಿ ಅಳುವ ದೃಶ್ಯ ಗುರು ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ:ಶಿಕ್ಷಕಿಯರ ವರ್ಗಾವಣೆ- ಬಿಕ್ಕಿಬಿಕ್ಕಿ ಅತ್ತ ವಿದ್ಯಾರ್ಥಿಗಳು
Advertisement
Advertisement
ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗುಲ್ಲಳ್ಳಿ ತಾಂಡಾದವರಾದ ಶಿಕ್ಷಕ ಅನಿಲ್ ರಾಠೋಡ್ ಕಳೆದ 9 ವರ್ಷದಿಂದ ಇದೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲಿ ಇಲ್ಲಿನ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ಆದರೆ ಈಗ ತಮ್ಮೂರಿನ ಸಮೀಪವೇ ಇರುವ ಆಳಂದ ತಾಲೂಕಿನ ರುದ್ರವಾಡಿ ಗ್ರಾಮಕ್ಕೆ ಅನಿಲ್ ಅವರು ವರ್ಗಾವಣೆಗೊಂಡಿದ್ದು, ಕುಮಾರ ಚಿಂಚೊಳಿ ಗ್ರಾಮದ ಶಾಲೆಯಿಂದ ತೆರಳುತ್ತಿದ್ದ ಶಿಕ್ಷಕರಿಗಾಗಿ ವಿದ್ಯಾರ್ಥಿಗಳೆಲ್ಲರೂ ಗೊಳೋ ಎಂದು ಅತ್ತಿದ್ದಾರೆ. ನಮ್ಮನ್ನು ಬಿಟ್ಟು ಹೊಗಬೇಡಿ ಸಾರ್ ಎಂದು ಅಂಗಲಾಚಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋ ನೋಡಿದರೆ ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾರೆ ಎನ್ನುವುದು ತಿಳಿಯುತ್ತದೆ.