ಧಾರವಾಡ: ಇಂದು ದೇಶಾದ್ಯಂತ 72ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದೇ ಧಾರವಾಡ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳು ಕಣ್ಣೀರು ಹಾಕಿದ್ದಾರೆ.
ಹೌದು. ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಪಥ ಸಂಚಲನದಲ್ಲಿ ಬ್ಯಾಂಡ್ ಬಾರಿಸಲು ಅವಕಾಶ ನೀಡದ ಕಾರಣ ಮಕ್ಕಳು ಕಣ್ಣೀರು ಹಾಕಿದ್ದಾರೆ. ಅಲ್ಲದೇ ಬೇಸರದಿಂದ ಮಕ್ಕಳು ವಾಪಸ್ ಆಗಿದ್ದಾರೆ.
Advertisement
Advertisement
ಕಣ್ಣೀರು ಹಾಕಿದ್ದು ಯಾಕೆ?:
ಜಿಲ್ಲಾಡಳಿತದಿಂದ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಬ್ಯಾಂಡ್ ಬಾರಿಸಲು ಧಾರವಾಡದ ಪ್ರೆಸೆಂಟೆಷನ್ ಸ್ಕೂಲ್ ಮಕ್ಕಳ ಬ್ಯಾಂಡ್ ತಂಡಕ್ಕೆ ಜಿಲ್ಲಾಧಿಕಾರಿಯೇ ಆಹ್ವಾನ ನೀಡಿದ್ದರು. ಹೀಗಾಗಿ ಡಿಸಿ ಆಹ್ವಾನದ ಮೇರೆಗೆ ಧಾರವಾಡದ ಪ್ರಜೆಂಟೇಶನ್ ಶಾಲೆ ಮಕ್ಕಳು ಎಲ್ಲ ತಯಾರಿ ಮಾಡಿಕೊಂಡು ಬಂದಿದ್ದರು. ಆದ್ರೆ ಡಿಸಿ ಅನುಮತಿ ಇದ್ದರೂ ಕೂಡ ಪೊಲೀಸ್ ಬ್ಯಾಂಡ್ ತಂಡವು ಶಾಲಾ ಮಕ್ಕಳನ್ನು ಹೊರಹಾಕಿದೆ. ಈ ಕಾರಣದಿಂದ ಮಕ್ಕಳು ಕಣ್ಣೀರು ಹಾಕುತ್ತಲೇ ಕಾರ್ಯಕ್ರಮದಿಂದ ಹೊರಬಂದಿದ್ದಾರೆ.
Advertisement
ಕೆಲ ದಿನಗಳಿಂದ ಪೂರ್ವ ತಯಾರಿ ನಡೆಸಿದ್ದ ಮಕ್ಕಳ ಪ್ರತಿಭೆ ಗಮನಿಸಿ ಜಿಲ್ಲಾಧಿಕಾರಿ ಮಂಗಳವಾರ ಸಂಜೆ ಈ ಅನುಮತಿ ನೀಡಿದ್ದರು ಎನ್ನಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv