Connect with us

Chikkamagaluru

ಸರ್ಕಾರಿ ಕಾಲೇಜಿನಲ್ಲಿ ಬುರ್ಖಾಕ್ಕೆ ವಿರೋಧ – ಕೇಸರಿ ಶಾಲಿನೊಂದಿಗೆ ಕ್ಲಾಸ್‍ಗೆ ಬಂದ ವಿದ್ಯಾರ್ಥಿಗಳು

Published

on

ಚಿಕ್ಕಮಗಳೂರು: ಶಿವಮೊಗ್ಗದ ಸಹ್ಯಾದ್ರಿ ಕಾಲೇಜು, ಸಾಗರ, ತೀರ್ಥಹಳ್ಳಿಯ ಬಳಿಕ ಬುರ್ಖಾ ವಿವಾದ ಕಾಫಿನಾಡಿಗೂ ಕಾಲಿಟ್ಟಿದೆ.

ಜಿಲ್ಲೆಯ ಕೊಪ್ಪ ತಾಲೂಕಿನ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ. ಹಲವು ವರ್ಷಗಳಿಂದಲೂ ಕಾಲೇಜಿಗೆ ಬರುತ್ತಿದ್ದ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ರೆಸ್ಟ್ ರೂಂನಲ್ಲಿ ಬುರ್ಖಾವನ್ನ ತೆಗೆದಿಟ್ಟು ಎಲ್ಲಾ ವಿದ್ಯಾರ್ಥಿಗಳಂತೆ ತರಗತಿಗೆ ಹಾಜರಾಗುತ್ತಿದ್ದರು. ಆದರೆ ಈ ವರ್ಷ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿಯೇ ತರಗತಿಗಳಿಗೆ ಬರುತ್ತಿದ್ದರು.

ಇಷ್ಟು ವರ್ಷವಿದ್ದಂತೆ ಇರಲಿ, ಅವರಿಗೆ ಬುರ್ಖಾ ತೆಗೆದು ಬರುವಂತೆ ಹೇಳಿ ಎಂದು ಎಬಿವಿಪಿ ವಿದ್ಯಾರ್ಥಿಗಳು ಪ್ರಾಂಶುಪಾಲ ಅನಂತ್ ಅವರಿಗೆ ಜೂನ್ 30ರ ಶನಿವಾರ ಮನವಿ ಮಾಡಿಕೊಂಡಿದ್ದರು. ಆದರೆ ಪ್ರಾಂಶುಪಾಲ ಅನಂತ್ ಆ ರೀತಿ ಕಾನೂನಿನಲ್ಲಿ ಅವಕಾಶವಿಲ್ಲ. ಸ್ಕಾರ್ಫ್ ಧರಿಸದಂತೆ ನಿರ್ಬಂಧವಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಾಂಶುಪಾಲರ ಹೇಳಿಕೆಯಿಂದ ಕೆರಳಿದ ಎಬಿವಿಪಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರೋದಾಗಿ ಪ್ರಿನ್ಸ್ ಪಾಲ್‍ಗೆ ಸೆಡ್ಡು ಹೊಡಿದಿದ್ದಾರೆ. ಹೇಳಿದಂತೆ ಜುಲೈ 2ನೇ ಸೋಮವಾರ ಎಬಿವಿಪಿ ವಿದ್ಯಾರ್ಥಿಗಳೆಲ್ಲರೂ ಕಾಲೇಜಿಗೆ ಕೇಸರಿ ಶಲ್ಯ ಧರಿಸೇ ಬಂದಿದ್ದಾರೆ.

Click to comment

Leave a Reply

Your email address will not be published. Required fields are marked *