ಧಾರವಾಡ: ಜೀನ್ಸ್ ಪ್ಯಾಂಟ್ ಹಾಗೂ ಚೂಡಿದಾರ ಹಾಕೋದನ್ನು ಬಿಟ್ಟು ಸ್ವಲ್ಪ ಡಿಫ್ರೆಂಟಾಗಿ ಡ್ರೆಸ್ಸಿಂಗ್ ಮಾಡಿಕೊಂಡು ಧಾರವಾಡ ನಗರದ ಜಿಗಳೂರ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಮಿಂಚಿದ್ದಾರೆ.
ಕಾಲೇಜಿನಲ್ಲಿ ಶನಿವಾರ ಸಾಂಪ್ರದಾಯಿಕ ದಿನ ಆಚರಣೆ ಮಾಡಿದ್ದಾರೆ. ಆದ್ದರಿಂದ ವಿದ್ಯಾರ್ಥಿನಿಯರೆಲ್ಲರೂ ಸೇರಿ ಚೂಡಿದಾರ ಹಾಗೂ ಜೀನ್ಸ್ ಪ್ಯಾಂಟ್ ಹಾಕುವುದನ್ನು ಬಿಟ್ಟು, ಇಳಕಲ್ ಸೀರೆಯನ್ನು ತೊಟ್ಟು ಕಲರ್ ಫುಲ್ ಆಗಿ ಮಿಂಚುತ್ತಿದ್ದರು.
Advertisement
Advertisement
ವಿದ್ಯಾರ್ಥಿಗಳು ಇಲ್ಲಿ ಸ್ವಲ್ಪ ಡಿಫ್ರೆಂಟಾಗಿಯೇ ಸಾಂಪ್ರದಾಯಿಕ ದಿನ ಆಚರಣೆ ಮಾಡಿದ್ದಾರೆ. ಅಂದರೆ ಸೀರೆಯ ಜೊತೆ ಸೊಂಟದ ಪಟ್ಟಿ, ಕೈಯಲ್ಲಿ ಕಲರ್ ಕಲರ್ ಬಳೆ, ಹಾಗೂ ಕುತ್ತಿಗೆಯಲ್ಲಿ ಚಿನ್ನದ ಸರ ಹಾಕಿ ಬಂದಿದ್ದರು. ಅಷ್ಟೇ ಅಲ್ಲದೇ ಕ್ಯಾಮೆರಾ ಎದುರು ಡಿಫ್ರೆಂಟಾಗಿ ಪೋಸ್ ಕೊಟ್ಟು, ತಮ್ಮ ಗೆಳತಿಯರ ಜೊತೆ ಮೊಬೈಲ್‍ನಲ್ಲಿ ಸೆಲ್ಫಿ ತೆಗೆಸಿಕೊಳ್ಳುವ ಮೂಲಕ ಸಂತಸ ಪಟ್ಟಿದ್ದಾರೆ.