ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರತಿನಿತ್ಯ ಅನೇಕ ಉತ್ಸವ, ಫೆಸ್ಟ್ ಗಳನ್ನು ಕಾಣುತ್ತೇವೆ. ಆದರೆ ಇಲ್ಲಿಯ ಕಾಲೇಜಿನಲ್ಲಿ ಫೆಸ್ಟ್ ಮಾತ್ರ ಡಿಫರೆಂಟ್ ಆಗಿತ್ತು. ಅಲ್ಲಿ ವಿದ್ಯಾರ್ಥಿಗಳೆಲ್ಲಾ ಹೊಸ ಲೋಕ ಸೃಷ್ಟಿಸಿದರು.
ನಗರದ ಪೀಣ್ಯದಲ್ಲಿರೋ ಎನ್‍ಟಿಟಿಎಫ್ ಟ್ರೈನಿಂಗ್ ಸೆಂಟರ್ ನಲ್ಲಿ ಗುರುವಾರ ಫೆಸ್ಟ್ ನಡೆದಿದೆ. ಕಾಲೇಜು ಕ್ಯಾಂಪಸ್‍ನಲ್ಲಿ ಗುರುವಾರ ಕಲಾಸಂಗಮ ಎಂಬ ಹೆಸರಿನಲ್ಲಿ ಕಲ್ಚರಲ್ ಫೆಸ್ಟ್ ಆಯೋಜಿಸಲಾಗಿತ್ತು. ಈ ಫೆಸ್ಟ್ ಅನ್ನು ನಿರ್ದೇಶಕ ಯೋಗರಾಜ್ ಭಟ್ ಉದ್ಘಾಟಿಸಿದರು. ಇಲ್ಲಿ ವಿವಿಧ ರಾಜ್ಯಗಳ ಜಾನಪದ ಕಲೆಗಳನ್ನು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು. 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಜಾನಪದ ಕಲೆಗಳನ್ನು ಅನಾವರಣಗೊಳಿಸಿದರು.
ನಮ್ಮ ಕೃಷಿಕರ ಸುಗ್ಗಿ ನೃತ್ಯ ಹಳ್ಳಿ ಸೊಬಗನ್ನು ಬಿಂಬಿಸಿತ್ತು. ರಾಜಸ್ಥಾನದ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಎಲ್ಲರನ್ನೂ ಆಕರ್ಷಿಸಿತ್ತು. ಬೆಂಗಾಲಿ, ತುಳು ನಾಡಿನ ಸಂಸ್ಕೃತಿಯನ್ನು ಸಾರುವುದರ ಜೊತೆಗೆ ಅನೇಕ ನೃತ್ಯಗಳು ಎಲ್ಲರ ಹುಬ್ಬೇರಿಸುವಂತೆ ಮಾಡಿದವು. ಜೊತೆಗೆ ಯೋಧರಿಗೆ ತಮ್ಮ ಪ್ರದರ್ಶನದ ಮೂಲಕ ಹಾಟ್ಸಾಫ್ ಹೇಳಿದರು. ಜುಂಗಲ್ ಬಂದಿ ಎಲ್ಲರ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿತ್ತು. ಚೆಲ್ಲಿದರೂ ಮಲ್ಲಿಗೆಯ ಜಾನಪದ ನೃತ್ಯ ನೆರೆದವರ ಹುಬ್ಬೇರಿಸುವಂತೆ ಮಾಡಿತ್ತು.