-ಅಪಘಾತದ ನಂತರವೂ ಎಚ್ಚೆತ್ತುಕೊಳ್ಳದ ಆರ್‌ಟಿಓ, ಪೊಲೀಸರು
ಚಿಕ್ಕಬಳ್ಳಾಪುರ: ನಿನ್ನೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮರಿನಾಯಕನಹಳ್ಳಿ ಬಳಿ ಲಾರಿ ಹಾಗೂ ಜೀಪ್ ನಡುವೆ ಮುಖಾಮುಖಿ ಡಿಕ್ಕಿಯಾಗಿ 8 ಜನ ಸಾವನ್ನಪ್ಪಿದ್ದು, ಮತ್ತೆ 8 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಆರ್‌ಟಿಓ ಹಾಗೂ ಪೊಲೀಸರು ಮಾತ್ರ ಎಚ್ಚೆತ್ತುಕೊಂಡಿಲ್ಲ.
Advertisement
ಗ್ರಾಮೀಣ ಭಾಗದಿಂದ ಚಿಂತಾಮಣಿ ನಗರಕ್ಕೆ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಖಾಸಗಿ ಬಸ್‍ಗಳ ಟಾಪ್ ಮೇಲೆ ಪ್ರಯಾಣ ಮಾಡುತ್ತಿದ್ದಾರೆ. ಬಸ್‍ಗಳ ಟಾಪ್ ಮೇಲೆ ಸಾವಿನ ಸವಾರಿ ಮಾಡುತ್ತಿದ್ದರೂ ಆರ್‌ಟಿಓ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಸುಮ್ಮನಾಗಿದ್ದಾರೆ. ಇದನ್ನೂ ಓದಿ: ಸುಪ್ರೀಂ ಆದೇಶ ಹಿಂದೂಗಳಿಗೆ ಮಾತ್ರವೇ – ಮೈಸೂರು ಡಿಸಿಗೆ ಯತ್ನಾಳ್ ಪ್ರಶ್ನೆ
Advertisement
Advertisement
ಖಾಸಗಿ ಬಸ್ ಗಳ ಟಾಪ್ ಸೇರಿದಂತೆ ಮಿತಿ ಮೀರಿದ ಪ್ರಯಾಣಿಕರನ್ನು ಕಿಕ್ಕಿರಿದು ತುಂಬಿಕೊಂಡು ಖಾಸಗಿ ಬಸ್‍ಗಳು ಬೇಕಾಬಿಟ್ಟಿ ಸಂಚಾರ ಮಾಡುತ್ತಿದ್ದರೂ, ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಬಸ್‍ನ ಬಾಗಿಲಿನಲ್ಲಿಯೇ ನಿಂತು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಾ ಸಾವಿನ ಜೊತೆ ಸೆಣಸಾಡುವಂತಿದೆ. ಪ್ರತಿ ನಿತ್ಯ ಖಾಸಗಿ ಬಸ್ ಗಳಲ್ಲಿ ಇದೇ ಪರಿಸ್ಥಿತಿ ಇದ್ದರೂ ಇಲ್ಲಿನ ಅಧಿಕಾರಿಗಳು ಮಾತ್ರ ಕಣ್ಣಿಲ್ಲದಂತವರಾಗಿದ್ದಾರೆ. 60-70 ಜನ ತುಂಬುವ ಖಾಸಗಿ ಬಸ್‍ನಲ್ಲಿ 120ಕ್ಕೂ ಹೆಚ್ಚು ಮಂದಿ ಪ್ರಯಾಣ ಮಾಡುತ್ತಿದ್ದಾರೆ. ಅದರಲ್ಲೂ ಬೆಳಿಗ್ಗೆ ಹಾಗೂ ಸಂಜೆ ಶಾಲಾ-ಕಾಲೇಜುಗಳಿಗೆ ಬರುವಾಗ ಹಾಗೂ ಮನೆಗೆ ಹೋಗುವಾಗ ಬಸ್‍ಗಳು ವಿದ್ಯಾರ್ಥಿಗಳಿಂದ ಕಿಕ್ಕಿರಿದು ತುಂಬಿರುತ್ತವೆ. ಒಬ್ಬರ ಮೇಲೆ ಒಬ್ಬರು ಬಿದ್ದು ಪ್ರಯಾಣ ಮಾಡುತ್ತಿದ್ದಾರೆ. ಬಸ್‍ಗಳ ಟಾಪ್ ಮೇಲೆಯೇ 30-40 ಮಂದಿ ಪ್ರಯಾಣ ಮಾಡುತ್ತಾರೆ. ಇದನ್ನೂ ಓದಿ: ಯಾದಗರಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ನಾಲ್ವರು ಅರೆಸ್ಟ್
Advertisement
ಬಟ್ಲಹಳ್ಳಿ, ಚೇಳೂರು ಮುರುಗಮಲ್ಲ ಕಡೆಯ ಗ್ರಾಮೀಣ ಭಾಗಗಳಿಂದ ಶಾಲಾ ಕಾಲೇಜುಗಳ ಸಮಯದಲ್ಲಿ ಹೆಚ್ಚಿನ ಸರ್ಕಾರಿ ಬಸ್ ಸೌಲಭ್ಯ ಇಲ್ಲ. ಎರಡು ಮೂರು ಬಸ್‍ಗಳು ಮಾತ್ರ ಸಂಚಾರ ಮಾಡುತ್ತವೆ. ಹೀಗಾಗಿ ಈ ಸಮಯದಲ್ಲಿ ಖಾಸಗಿ ಬಸ್‍ಗಳು ಹೆಚ್ಚಾಗಿ ಸಂಚಾರ ಮಾಡುತ್ತವೆ. ಹಾಗಾಗಿ ಖಾಸಗಿ ಬಸ್‍ಗಳನ್ನೇ ಜನ ಹಾಗೂ ವಿದ್ಯಾರ್ಥಿಗಳು ಅವಲಂಬಿಸಿದ್ದಾರೆ. ಆದರೆ ಖಾಸಗಿ ಬಸ್‍ಗಳ ಅತಿ ವೇಗ ಚಾಲನೆ ನೋಡಿದರೆ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳಿಸುವುದಕ್ಕೂ ಭಯವಾಗುತ್ತದೆ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.