– ಶಿಕ್ಷಣ ನೀತಿ ಬದಲಿಸಿದ ಕೇಂದ್ರ ಸರ್ಕಾರ
ಬೆಂಗಳೂರು: ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಓದದ ಮಕ್ಕಳನ್ನು ಪಾಸ್ ಮಾಡುವಂತೆ ಇದ್ದ ಶಿಕ್ಷಣ ಹಕ್ಕು ಕಾಯ್ದೆಗೆ ಕೇಂದ್ರ ಸರ್ಕಾರ ಹೊಸ ತಿದ್ದುಪಡಿಯನ್ನು ತಂದಿದೆ. ಈ ಮೂಲಕ ಓದದ ಮಕ್ಕಳನ್ನು ಇನ್ಮುಂದೆ ಫೇಲ್ ಮಾಡಬಹುದಾಗಿದೆ.
2009ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಶಿಕ್ಷಣ ಹಕ್ಕು ಕಾಯ್ದೆ ಮೊನ್ನೆಯಷ್ಟೇ ಕೇಂದ್ರ ಸರ್ಕಾರ ತಿದ್ದುಪಡಿಗೆ ತಂದಿತ್ತು. ಈ ಹೊಸ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಹೊಸ ತಿದ್ದು ಪಡಿಗೆ ಕೇಂದ್ರ ಸರ್ಕಾರ ಅಧಿಕೃತ ರಾಜ್ಯ ಪತ್ರ ಹೊರಡಿಸಿದೆ. ಹೀಗಾಗಿ ಇನ್ಮುಂದೆ ಪ್ರತಿ ವಿದ್ಯಾರ್ಥಿಗಳು ಪಾಸ್ ಆದರೆ ಮಾತ್ರ ಮುಂದಿನ ತರಗತಿಯಲ್ಲಿ ವ್ಯಾಸಂಗ ಮಾಡಬಹುದಾಗಿದೆ.
ಹೊಸ ತಿದ್ದುಪಡಿ ಅನ್ವಯ ಇನ್ಮುಂದೆ 5 ಮತ್ತು 8ನೇ ತರಗತಿಯ ಕೊನೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು. ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಮುಂದಿನ ತರಗತಿಗೆ ತೇರ್ಗಡೆ ಹೊಂದುತ್ತಾರೆ. ಒಂದು ವೇಳೆ 5-8ನೇ ತರಗತಿಯ ಪರೀಕ್ಷೆಯಲ್ಲಿ ಫೇಲ್ ಆದರೆ ಮುಂದಿನ ಎರಡು ತಿಂಗಳಲ್ಲಿ ಮರು ಪರೀಕ್ಷೆಯನ್ನ ಶಾಲೆಯವರು ನೀಡಬೇಕು.
ವಿದ್ಯಾರ್ಥಿ ಮರು ಪರೀಕ್ಷೆಯಲ್ಲೂ ಫೇಲ್ ಆದರೆ ಇನ್ನೊಂದು ವರ್ಷ ಹಿಂದಿನ ತರಗತಿಯಲ್ಲೇ ವ್ಯಾಸಂಗ ಮುಂದುವರಿಸಬೇಕಾಗುತ್ತದೆ. 2009ರಿಂದ ಕಾಯ್ದೆ ಜಾರಿಗೆ ಬಂದಾಗಿನಿಂದ ದೇಶದಲ್ಲಿ ಶೈಕ್ಷಣಿಕ ಮೌಲ್ಯದ ಮಟ್ಟ ಕುಸಿಯುತ್ತಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಮಹತ್ವದ ತಿದ್ದುಪಡಿಯನ್ನು ಜಾರಿಗೆ ತಂದಿದೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv