ತಲೆಗೆ ಬಕೆಟ್ ಹಾಕಿ ಶಿಕ್ಷಕನ ಮೇಲೆ ಪುಂಡತನ ಮೆರೆದ ವಿದ್ಯಾರ್ಥಿಗಳು!

Advertisements

ದಾವಣಗೆರೆ: ಶಿಕ್ಷಕನ ಮೇಲೆ ಹಲ್ಲೆಗೈದು ವಿದ್ಯಾರ್ಥಿಗಳು ಪುಂಡತನ ಮೆರೆದ ಘಟನೆಯೊಂದು ದಾವಣಗೆರೆಯಲ್ಲಿ ನಡೆದಿದೆ.

Advertisements

ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಸರ್ಕಾರಿ ಹೈಸ್ಕೂಲ್ ನಲ್ಲಿ ಈ ಘಟನೆ ನಡೆದಿದೆ. ಹಿಂದಿ ಶಿಕ್ಷಕ ಪ್ರಕಾಶ್ ಮೇಲೆ ವಿದ್ಯಾರ್ಥಿಗಳು ದುರ್ವರ್ತನೆ ತೋರಿದ್ದಾರೆ.

Advertisements

ಪ್ರಕಾಶ್ ಅವರು ಪಾಠ ಮಾಡಲೆಂದು ತರಗತಿಗೆ ಬಂದಿದ್ದಾರೆ. ಆದರೆ ಶಿಕ್ಷಕ ಪಾಠ ಮಾಡುತ್ತಿರುವುದನ್ನು ಕೇಳಿಸಿಕೊಳ್ಳದ ನಾಲ್ಕೈದು ವಿದ್ಯಾರ್ಥಿಗಳು ಅಮಾನವೀಯವಾಗಿ ವರ್ತಿಸಿದ್ದಾರೆ. ವಿದ್ಯಾರ್ಥಿಗಳ ಪುಂಡತನವನ್ನು ಉಳಿದ ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಲ್ಯಾಂಡಿಗ್ ಸಮಸ್ಯೆಯಾದ ಸಿಎಂ ಬೊಮ್ಮಾಯಿ ಇದ್ದ ವಿಮಾನ

ಈ ವಿಡಿಯೋ ನೋಡಿದ ಸಾರ್ವಜನಿಕರು ವಿದ್ಯಾರ್ಥಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೂಡಲೇ ಇವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಾಲೂ ಪ್ರಸಾದ್ ಪುತ್ರ ತೇಜಸ್ವಿ ಯಾದವ್

Advertisements

Advertisements
Exit mobile version