ಬೀದರ್: ಹಿಜಬ್ ತೆಗೆದು ಕ್ಲಾಸಿಗೆ ಬನ್ನಿ ಎಂದ ಪ್ರಾಂಶುಪಾಲರ ಮಾತು ಕೇಳದ ವಿದ್ಯಾರ್ಥಿನಿಯರು, ಹಿಜಬ್ ಧರಿಸಿ ಕ್ಲಾಸ್ ಗೆ ಅನುಮತಿ ನೀಡಿ ಎಂದು ಪಟ್ಟು ಹಿಡಿದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ನಡೆದಿದೆ.
ಇಂದು ಕಾಲೇಜು ಪ್ರಾರಂಭವಾಗಿದೆ. ಹುಮ್ನಾಬಾದ್ ಪಟ್ಟಣದ ಕಾಲೇಜ್‍ವೊಂದರಲ್ಲಿ ಹಿಜಬ್ ಧರಿಸಿ ಕಾಲೇಜಿಗೆ ವಿದ್ಯಾರ್ಥಿನಿಯರು ಬಂದಿದ್ದಾರೆ. ಆದರೆ ಹೈ-ಕೋರ್ಟ್, ಹಿಜಬ್ ಧರಿಸಿ ವಿದ್ಯಾರ್ಥಿನಿಯರಿಗೆ ಕಾಲೇಜು ಒಳಗೆ ಬಿಡದೆ ರೂಲ್ಸ್ ಪಾಲನೆ ಮಾಡಬೇಕು. ಈ ಹಿನ್ನೆಲೆ ಹಿಜಬ್ ಧರಿಸಿದ ವಿದ್ಯಾರ್ಥಿನಿಯರನ್ನು ಕಾಲೇಜು ಆಡಳಿತ ಮಂಡಳಿ ತಡೆದು ನಿಲ್ಲಿಸಿದೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿ ಅಚ್ಚರಿ ಮೂಡಿಸಿದ ಗುರುಪ್ರಸಾದ್
Advertisement
Advertisement
10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಿಜಬ್ ಧರಿಸಿ ಕಾಲೇಜಿಗೆ ಬಂದಿದ್ದು, ಹಿಜಬ್ ಸಹಿತ ಕಾಲೇಜು ಒಳಗಡೆ ಬಿಡದಕ್ಕೆ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಮನೆಗೆ ಹೋಗಿದ್ದಾರೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿರುವ ಶ್ರೀ ವೀರಭದ್ರೇಶ್ವರ ವಾಣಿಜ್ಯ ಹಾಗೂ ವಿಜ್ಞಾನ ಪದವಿ ಕಾಲೇಜಿನಲ್ಲಿ ಘಟನೆ ನಡೆದಿದೆ.
Advertisement
Advertisement
ಕ್ಲಾಸಿಗೆ ಬಿಡುವಂತ್ತೆ ಪೆÇೀಷಕರು ಬಂದು ಕೇಳಿದ್ದು, ಮೇಲಾಧಿಕಾರಿಗಳು ಬಿಡು ಎಂದ್ರೆ ನಾವು ಬಿಡುತ್ತೇವೆ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ. ಸರ್ಕಾರದ ಅಧಿಕಾರಿಗಳಾಗಿ ನಾವು ಸರ್ಕಾರದ ರೂಲ್ಸ್ ಗಳನ್ನು ಪಾಲನೆ ಮಾಡಬೇಕಾಗುತ್ತೆ ಎಂದ ಕಾಲೇಜಿನ ಪ್ರಾಂಶುಪಾಲರು ವೀಡಿಯೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ವಿಷ್ಣುವರ್ಧನ್ ಅವರ ಸಿನಿಮಾಗೆ ಬಪ್ಪಿ ಲಹರಿ ಹಾಡು
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಹುಮ್ನಾಬಾದ್ ಪಿಎಸ್‍ಐ ರವಿಕುಮಾರ್ ಭೇಟಿ ನೀಡಿದ್ದು, ವಿದ್ಯಾರ್ಥಿಗಳನ್ನು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.