ಬೆಂಗಳೂರು: ಈ ಬಾರಿ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳು ಕಂಡ ಚಿನ್ನದ ಕನಸಿಗೆ ನೀರು ಎರಚಲಾಗಿದೆ. ಬಡ್ಡಿ ಹಣ ಕಡಿಮೆ ಬರ್ತಿದೆ ಅಂತಾ ಗೋಲ್ಡ್ ಮೆಡಲ್ ನೀಡೋದನ್ನೇ ಬಂದ್ ಮಾಡಲಾಗುತ್ತಿದೆ.
ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ, ನೀವು ಹಗಲಿರುಳು ಓದಿ ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಅತಿ ಹೆಚ್ಚು ಅಂಕಗಳಿಸಿ ಚಿನ್ನದ ಪದಕಕ್ಕೆ ಅರ್ಹರಾಗಿದ್ದರೂ ಅದು ನಿಮಗೆ ದಕ್ಕುವುದಿಲ್ಲ. ಯಾಕಂದ್ರೆ ಗೋಲ್ಡ್ ಮೆಡಲ್ ಖರೀದಿಸುವ ಶಕ್ತಿ ವಿವಿಗೆ ಇಲ್ಲವಾದ ಕಾರಣ ಈ ಬಾರಿ ಸ್ಟೂಡೆಂಟ್ಸ್ ಗೆ ಗೋಲ್ಡ್ ಮೆಡಲ್ ಬದಲಿ 500 ರೂ. ಚೆಕ್ ನೀಡಲು ವಿವಿ ತೀರ್ಮಾನಿಸಿದೆ.
Advertisement
Advertisement
ಪ್ರತಿ ವರ್ಷ ಬೆಂಗಳೂರು ವಿಶ್ವವಿದ್ಯಾಲಯದ ನಡೆಸುವ ಘಟಿಕೋತ್ಸವದಲ್ಲಿ ಸಾಧನೆ ಮಾಡಿದ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ವಿವಿ ಗೋಲ್ಡ್ ಮೆಡಲ್ ನೀಡಿ ಗೌರವಿಸುತ್ತದೆ. ಈ ಗೋಲ್ಡ್ ಮೆಡಲ್ ಪಡೆಯೋಕ್ಕೆ ಅಂತಾನೇ ಅದೆಷ್ಟೋ ಜನ ವಿದ್ಯಾರ್ಥಿಗಳು ಹಗಲು ರಾತ್ರಿ ಅಂತಾ ಓದುತ್ತಾರೆ. ಇದು ವಿದ್ಯಾರ್ಥಿ ಜೀವನ ಮಟ್ಟದಲ್ಲಿ ಕಾಣುವ ದೊಡ್ಡ ಕನಸು ಆಗಿರುತ್ತದೆ. ವಿವಿ ವಿದ್ಯಾರ್ಥಿಗಳಿಗೆ ಕೆ.ಜಿ ಲೆಕ್ಕದಲ್ಲಿ ಗೋಲ್ಡ್ ಕೊಡಲ್ಲ. ಕೊಡುವುದು 1.3 ಗ್ರಾಂ ಚಿನ್ನ ಲೇಪಿತ ಮೆಡಲ್. ಆದರೆ ಈ ಬಾರಿ ಈ ಚಿನ್ನದ ಲೇಪಿತ ಮೆಡಲ್ ಖರೀದಿಸುವ ಶಕ್ತಿ ವಿವಿ ಬಳಿ ಇಲ್ಲವಾಗಿದೆ.
Advertisement
ಪ್ರತಿ ವರ್ಷ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಗೋಲ್ಡ್ ಮೆಡಲ್ ನೀಡೋಕ್ಕೆ ಅಂತಾನೇ ದಾನಿಗಳು ಹಣ ಠೇವಣಿ ಇಟ್ಟಿರುತ್ತಾರೆ. ಅದರಿಂದ ಬರುವ ಬಡ್ಡಿ ಹಣವನ್ನು ವಿದ್ಯಾರ್ಥಿಗಳ ಏಳಿಗೆಗೆ ಬಳಸಬಹುದಾಗಿದೆ. ಅದೇ ಠೇವಣಿ ಇಟ್ಟ ಹಣದಿಂದ ಬರುವ ಬಡ್ಡಿ ಹಣದಿಂದಲ್ಲೇ ರ್ಯಾಂಕ್ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಗುತ್ತದೆ. ಆದರೆ ಇತ್ತೀಚೆಗೆ ಠೇವಣಿಯಿಂದ ಬರುವ ಬಡ್ಡಿ ಹಣ ಕಡಿಮೆ ಆಗ್ತಿದ್ದು, ಗೋಲ್ಡ್ ಮೆಡಲ್ ಖರೀದಿಸುವ ಮೊತ್ತ ಹೆಚ್ಚಾಗುತ್ತಿದೆ. ಆದರಿಂದ ಈ ಬಾರಿಯ 53 ನೇ ಘಟಿಕೋತ್ಸವದ ದಿನ ಗೋಲ್ಡ್ ಮೆಡಲ್ ಗೆ ಆಯ್ಕೆಯಾಗಿರುವ 179 ಜನರ ಪೈಕಿ 79 ಜನ ವಿದ್ಯಾರ್ಥಿಗಳಿಗೆ ಗೋಲ್ಡ್ ಮೆಡಲ್ ಬದಲು 500 ರೂ ಚೆಕ್ ನೀಡಲು ವಿವಿ ನೀಡುತ್ತಿದೆ.
Advertisement
ವಿವಿಯಲ್ಲಿ ಚಿನ್ನದ ಪದಕ ಪಡೆಯಬೇಕು ಎಂಬ ಕನಸಿಗೆ ವಿವಿ ತಣ್ಣೀರು ಹಾಕಿದೆ. ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಉತ್ಸಾಹ ಮೂಡಿಸುವ ಮಾರ್ಗ ಅಂದ್ರೆ ಅದು ಗೋಲ್ಡ್ ಮೆಡಲ್ ಪುರಸ್ಕಾರ ಈಗ ಅದು ಕೂಡಾ ಬಂದ್ ಆಗುತ್ತಿದೆ.