ದಾವಣಗೆರೆ: ನಲ್ಲೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಹಿಂದಿ ಶಿಕ್ಷಕರನ್ನು ಅಪಮಾನಿಸಿದ್ದ ಎಸ್‍ಎಸ್‍ಎಲ್‍ಸಿಯ ಕೆಲ ವಿದ್ಯಾರ್ಥಿಗಳಿಗೆ ಈಗ ತಪ್ಪಿನ ಅರಿವಾಗಿದೆ. ಶಿಕ್ಷಕ ಪ್ರಕಾಶ್ ಕಾಲಿಗೆ ಬಿದ್ದು ತಪ್ಪಾಯ್ತು ಕ್ಷಮಿಸಿ ಎಂದು ಕೇಳಿದ್ದಾರೆ.
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕ ಪ್ರಕಾಶ್ ಅವರು ಉದಾರ ಮನಸ್ಸಿನಿಂದ ಕ್ಷಮಿಸಿದ್ದಾರೆ. ನನ್ನ ಸೇವೆ ಇನ್ನೊಂದು ವರ್ಷ ಇದೆ. ದೂರು ಕೊಟ್ಟರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಸಹಿಸಿಕೊಂಡಿದ್ದೆ ಎಂದು ಪ್ರಕಾಶ್ ಹೇಳಿದ್ದಾರೆ. ಇದನ್ನೂ ಓದಿ: 20 ಲಕ್ಷ ಮೌಲ್ಯದ ಮರಡೋನಾ ವಾಚ್ ಅಸ್ಸಾಂನಲ್ಲಿ ವಶಕ್ಕೆ
Advertisement
Advertisement
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಗ್ರಾಮಸ್ಥರು ಮತ್ತು ಕೆಲ ಸಂಘಟನೆಗಳು ಆ ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿದ್ದಾರೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೂಡ ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರು ಹಾಗೂ ಶಿಕ್ಷಕರ ಜೊತೆ ಸಭೆ ನಡೆಸಿದರು. ಇದನ್ನೂ ಓದಿ: ನಶೆಯಲ್ಲಿ ಪ್ರಿಯಕರನ ದೇಹ ತುಂಡರಿಸಿದಳು- ಛಿದ್ರವಾದ ದೇಹದ ಜೊತೆಗೆ ನಿದ್ರೆಗೆ ಜಾರಿದಳು
Advertisement
ನಡೆದಿದ್ದು ಏನು?
ಪ್ರಕಾಶ್ ಅವರು ಪಾಠ ಮಾಡಲೆಂದು ತರಗತಿಗೆ ಬಂದಿದ್ದಾರೆ. ಆದರೆ ಪ್ರಕಾಶ್ ಪಾಠ ಮಾಡುತ್ತಿರುವುದನ್ನು ಕೇಳಿಸಿಕೊಳ್ಳದ ನಾಲ್ಕೈದು ವಿದ್ಯಾರ್ಥಿಗಳು ಅಮಾನವೀಯವಾಗಿ ವರ್ತಿಸಿದ್ದಾರೆ. ತಲೆಗೆ ಬಕೆಟ್ ಹಾಕಿ ಶಿಕ್ಷಕನ ಮೇಲೆ ಪುಂಡತನ ಮೆರೆದಿದ್ದಾರೆ. ವಿದ್ಯಾರ್ಥಿಗಳ ಪುಂಡತನವನ್ನು ಉಳಿದ ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.