ಜೈಪುರ: ಕೆಲ ತಿಂಗಳ ಹಿಂದೆ ಸೀಮಾ ಹೈದರ್ (Seema Haider) ಎನ್ನುವ ಹೆಸರು ಭಾರೀ ಸುದ್ದಿಯಲ್ಲಿತ್ತು. ತನ್ನ ಪ್ರೇಮಿ ಸಚಿನ್‍ಗಾಗಿ ಪಾಕಿಸ್ತಾನದಿಂದ (Pakistan) ಭಾರತಕ್ಕೆ ಬಂದಿರುವ ಸೀಮಾ ಹೈದರ್ ಸಾಕಷ್ಟು ಗಮನ ಸೆಳೆದಿದ್ದಳು. ಆದರೆ ಈ ಬಾರಿ ಅವರಿಬ್ಬರ ಪ್ರಕರಣ ಅಲ್ಲ ಬದಲಾಗಿ ಸೆಕೆಂಡ್ ಪಿಯುಸಿಯ ಪ್ರಶ್ನೆ ಪತ್ರಿಕೆಯಿಂದಾಗಿ ಸುದ್ದಿಯಾಗಿದ್ದಾಳೆ.
ಹೌದು. 12ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಉತ್ತರ ಪತ್ರಿಕೆಯಲ್ಲಿ ಬರೆದಿರುವ ಕುತೂಹಲಕಾರಿ ವಿಚಾರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ರಾಜಸ್ಥಾನದ (Rajasthan) ಧೋಲ್ಪುರ್ ಜಿಲ್ಲೆಯ ಬಸೇರಿಯಲ್ಲಿರುವ ಬಗ್ತಾರ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಉತ್ತರ ಪತ್ರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಭಾರತದಲ್ಲೇ ಇರಲು ಅವಕಾಶ ಕೊಡಿ – ರಾಷ್ಟ್ರಪತಿಗೆ ಸೀಮಾ ಹೈದರ್ ಪತ್ರ
ಪ್ರಶ್ನೆ- ಉತ್ತರ ಏನು..?: ರಾಜ್ಯಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಮತ್ತು ಅದರ ಉದ್ದದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ವಿದ್ಯಾರ್ಥಿ ನೀಡಿರುವ ಉತ್ತರ ಎಲ್ಲರ ಗಮನಸೆಳೆದಿದೆ. ಅಲ್ಲದೆ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ನೋಡಿದ ಶಿಕ್ಷಕರೇ ಒಂದು ಬಾರಿ ದಂಗಾಗಿ ಹೋಗಿದ್ದಾರಂತೆ. ಭಾರತ ಮತ್ತು ಪಾಕಿಸ್ತಾನದ ಗಡಿ ಸೀಮಾ ಹೈದರ್, ಉದ್ದ 5 ಅಡಿ 6 ಇಂಚು ಎಂದು ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾನೆ. ಸದ್ಯ ಈ ಉತ್ತರ ಪತ್ರಿಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೆಂಡಿಂಗ್ ಆಗಿದೆ.
ಪಾಕಿಸ್ತಾನಿ ಪ್ರಜೆಯಾಗಿರುವ ಸೀಮಾ ಹೈದರ್ ಕಳೆದ ತಿಂಗಳಷ್ಟೇ ಭಾರತೀಯ ಪತಿ ಸಚಿನ್ ಜೊತೆ ತನ್ನ ಮೊದಲ ‘ಕರ್ವಾ ಚೌತ್’ ಅನ್ನು ಆಚರಿಸಿ ಸುದ್ದಿಯಲ್ಲಿದ್ದಳು. ಈ ಹಿಂದೆ ಸೀಮಾ ಅವರು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭಾರತದ ಧ್ವಜಾರೋಹಣ ಮಾಡಿ ಸುದ್ದಿ ಮಾಡಿದ್ದಳು.
ಪಾಕಿಸ್ತಾನದ ಸಿಂಧ್ ಪ್ರ್ಯಾಂತದ ನಿವಾಸಿಯಾಗಿರುವ ಸೀಮಾ ಹೈದರ್ ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ತಾನು ತನ್ನ ಧರ್ಮವನ್ನು ಪರಿವರ್ತಿಸಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ಸದ್ಯ ಈಕೆ ಸನಾತನ ಧರ್ಮವನ್ನು ಅನುಸರಿಸುತ್ತಿದ್ದಾಳೆ. ಅಲ್ಲದೇ ಈಕೆ ತನ್ನ ಮಕ್ಕಳ ಹೆಸರನ್ನೂ ಬದಲಾಯಿಸಿದ್ದಾಳೆ. ಪಾಕಿಸ್ತಾನಿ ಪ್ರಜೆ ತನ್ನ ಗೆಳೆಯ ಸಚಿನ್ ಮೀನಾ ಜೊತೆ ಗ್ರೇಟರ್ ನೋಯ್ಡಾದಲ್ಲಿ ಇರಲು ಮೇ ತಿಂಗಳಲ್ಲಿ ಅಕ್ರಮವಾಗಿ ಭಾರತಕ್ಕೆ ಬಂದ ನಂತರ ಸುದ್ದಿ ಮಾಡಿದಳು.