ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

Public TV
2 Min Read
Moon 1

ಬೆಂಗಳೂರು: ಇಂದು (ಭಾನುವಾರ) ರಾತ್ರಿ ನಭೋಮಂಡಲದಲ್ಲಿ ಸಂಭವಿಸಿದ ರಾಹುಗ್ರಸ್ಥ, ಖಂಡಗ್ರಾಸ ಚಂದ್ರಗ್ರಹಣದ (Lunar Eclipse) ವಿಸ್ಮಯವನ್ನು ನೆಹರೂ ತಾರಾಲಯದಲ್ಲಿ (Nehru Planetarium) ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇಸ್ರೋ (ISRO) ಸಿಬ್ಬಂದಿ ಸೇರಿದಂತೆ ಅನೇಕರು ಕಣ್ತುಂಬಿಕೊಂಡರು.

ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೂ ವೀಕ್ಷಣೆ ಮಾಡಬಹುದೆಂದು ವಿಜ್ಞಾನಿಗಳು ಹೇಳಿದ್ದಾರೆ. ಇದರ ಹೊರತಾಗಿಯೂ ನೆಹರೂ ತಾರಾಲಯದಲ್ಲಿ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿದೆ. ಚಂದ್ರನ ಕೌತುಕ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದಲೂ ಶಿಕ್ಷಕರು, ವಿದ್ಯಾರ್ಥಿಲೂ (Students) ನೆಹರೂ ತಾರಾಲಯಕ್ಕೆ ಆಗಮಿಸಿದ್ದರು. ಇದನ್ನೂ ಓದಿ: ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

Nehru Planetarium 2

ಈ ಸಂತದವನ್ನು `ಪಬ್ಲಿಕ್ ಟಿವಿ’  (Public TV) ಜೊತೆಗೆ ಹಂಚಿಕೊಂಡರು. ಚಂದ್ರಗ್ರಹಣ ವೀಕ್ಷಣೆಯಿಂದ ಸಾಕಷ್ಟು ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡೆವು. ಶಾಲೆಗಳಲ್ಲಿ ಈ ಬಗ್ಗೆ ಮಕ್ಕಳಿಗೆ ಹೆಚ್ಚಿನ ತಿಳಿವಳಿಕೆ ನೀಡಬಹುದು. ಇಷ್ಟು ಹತ್ತಿರದಿಂದ ಚಂದ್ರನನ್ನು ನೋಡುತ್ತಿದ್ದೇವೆ. ಜೊತೆಗೆ ಗುರುಗ್ರಹವನ್ನೂ (Jupiter) ನೋಡುತ್ತಿರುವುದು ಖುಷಿ ಸಿಕ್ಕಿದೆ ಎಂದು ಹಾವೇರಿಯಿಂದ ಬಂದ ಶಿಕ್ಷಕರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ ಹಿನ್ನೆಲೆ – ರಾಯರ ವೃಂದಾವನಕ್ಕೆ ನಿರಂತರ ಜಲಾಭಿಷೇಕ

Nehru Planetarium

ಇನ್ನೂ ಕೆಲ ಮಕ್ಕಳು, ನಾವು ಪುಸ್ತಕಗಳಲ್ಲಿ ಮಾತ್ರವೇ ಗ್ರಹಣದ ಬಗ್ಗೆ ಓದಿದ್ದೆವು, ಕೇಳಿದ್ದೆವು. ಆದ್ರೆ ಈಗ ಕಣ್ಣಾರೆ ವೀಕ್ಷಿಸುತ್ತಿರುವುದು ವಿಸ್ಮಯವೇ ಅನ್ನಿಸಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿಯಂತಹ ನಾಯಕ ದೇಶಕ್ಕೆ ಅನಿವಾರ್ಯ.. ಮತ್ತೊಮ್ಮೆ ಮೋದಿ ನಾಯಕತ್ವ ಬೇಕು ಅನ್ನೋದು ತಪ್ಪಲ್ಲ: ಮಂತ್ರಾಲಯ ಶ್ರೀ

ಚಂದ್ರಗ್ರಹಣ ಕುರಿತು ಮಾಹಿತಿ ನೀಡಿದ್ದ ನೆಹರೂ ತಾರಾಲಯದ ವಿಜ್ಞಾನಿ ಆನಂದ್, ಮಧ್ಯರಾತ್ರಿ ಜಾವ 1:05 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಲಿದೆ. 3:05 ಕ್ಕೆ ಮೋಕ್ಷ ಆಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಭೂಮಿಯ ನೆರಳಿನ ಶಂಕು ದೊಡ್ಡದು. ಚಂದ್ರನನ್ನ ಇದು ಆವರಿಸಿಕೊಳ್ಳುತ್ತದೆ. ಚಂದ್ರಗ್ರಹಣ ಎಲ್ಲಾ ದೇಶಗಳಲ್ಲೂ ವೀಕ್ಷಣೆ ಮಾಡಬಹುದು. ಆದರೆ ಪ್ರಮಾಣ ಹೆಚ್ಚುಕಮ್ಮಿ ಇರುತ್ತದೆ. ಚಂದ್ರನ ಒಂದು ಭಾಗ ಮಾತ್ರ ನೆರಳಿನಿಂದ ಆವೃತವಾಗುತ್ತದೆ. 1:05ಕ್ಕೆ ಆರಂಭವಾಗಿ 1:45 ಗಂಟೆಗೆ ದಟ್ಟವಾಗುತ್ತದೆ. ಬೆಂಗಳೂರಿನಲ್ಲಿ 6% ಮಾತ್ರ ಛಾಯೆ ಸುತ್ತುವರಿಯುತ್ತದೆ. ಗರಿಷ್ಟ ಮಟ್ಟದ ಪ್ರಮಾಣ 1:45 ಗಂಟೆಗೆ ತಲುಪುತ್ತದೆ ಎಂದು ವಿವರಿಸಿದ್ದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article