ಮಡಿಕೇರಿ: ತನ್ನ ಕಾಲೇಜಿನಲ್ಲೇ ಓದುತ್ತಿರುವ ವಿದ್ಯಾರ್ಥಿನಿಯ ಸೀಮಂತ ಶಾಸ್ತ್ರವನ್ನು ಬೋಧಕರು ನೆರವೇರಿಸಿದ ಅಪರೂಪದ ಕ್ಷಣಕ್ಕೆ ಗೋಣಿಕೊಪ್ಪ ಕಾವೇರಿ ಕಾಲೇಜು ಸಾಕ್ಷಿಯಾಗಿದೆ.
ವಿದ್ಯಾರ್ಥಿನಿ ಶಾಲಿನಿ ಸೀಮಂತ ಶಾಸ್ತ್ರ ಆಚರಿಸಿ ಸಹಪಾಠಿಗಳು ಸಂತಸಪಟ್ಟಿದ್ದಾರೆ. ಶಾಲಿನಿ ಕಾವೇರಿ ಕಾಲೇಜಿನಲ್ಲಿ ದ್ವಿತೀಯ ಎಂಕಾಂ ಓದುತ್ತಿದ್ದಾರೆ. ಶಾಲಿನಿಗೆ 9 ತಿಂಗಳು ಪೂರೈಸಿರುವ ಹಿನ್ನೆಲೆಯಲ್ಲಿ ಸೀಮಂತ ಶಾಸ್ತ್ರ ಗುರುವಾರ ನಡೆದಿದೆ. ಇದನ್ನೂ ಓದಿ: ಪೊಲೀಸರಿಂದ ಠಾಣೆಯಲ್ಲಿಯೇ ಮಹಿಳಾ ಪೇದೆಗೆ ಸೀಮಂತ
Advertisement
Advertisement
ಗುರುವಾರ ಶಾಲಿನಿ ಅವರು ಎಂದಿನಂತೆ ಕಾಲೇಜಿಗೆ ಹೋಗಿದ್ದಾರೆ. ಈ ವೇಳೆ ಅವರ ಸಹಪಾಠಿಗಳು ಹಾಗೂ ಬೋಧಕರು ಸೀಮಂತ ಶಾಸ್ತ್ರ ನೆರವೇರಿಸಿ ಶಾಲಿನಿ ಅವರಿಗೆ ಅಚ್ಚರಿ ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಶಾಲಿನಿ ಅವರು ಸಹಪಾಠಿಗಳ ನೀಡಿದ ಅಚ್ಚರಿಗೆ ಖುಷಿಪಟ್ಟಿದ್ದಾರೆ.
Advertisement
ಹೆಣ್ಣು ಮಕ್ಕಳು ಕಾಲೇಜಿಗೆ ಆರತಿ ತಟ್ಟೆ ಹಿಡಿದು, ಹತ್ತಿ ಕಂಕಣ, ಅರಿಶಿಣ-ಕುಂಕುಮ ತಂದಿದ್ದರು. ಬಳಿಕ ಶಾಲಿನಿ ಅವರಿಗೆ ಅರಿಶಿಣ ಕುಂಕುಮ ಹಚ್ಚಿ, ಹೂ ಮೂಡಿಸಿ, ಆರತಿ ಬೆಳಗಿ, ಉಡುಗೊರೆ ನೀಡುವ ಮೂಲಕ ಸೀಮಂತ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಸಿಬ್ಬಂದಿಗೆ ಪೊಲೀಸ್ ಠಾಣೆಯಲ್ಲೇ ಸೀಮಂತ
Advertisement
ಈ ಹಿಂದೆ ಮೈಸೂರಿನಲ್ಲಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಯೊಬ್ಬರಿಗೆ ಸೀಮಂತ ಶಾಸ್ತ್ರವನ್ನು ಮಾಡಲಾಗಿತ್ತು. ಆದರೆ ಇದೇ ಮೊದಲ ಬಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಸೀಮಂತ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ.
https://www.youtube.com/watch?v=0ivTqKMMVfg&feature=youtu.be
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv