Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸರ್ಕಾರಿ ಹುದ್ದೆ ಭರ್ತಿಗೆ ಉದ್ಯೋಗಾಕಾಂಕ್ಷಿಗಳ ದಂಗೆ – ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dharwad | ಸರ್ಕಾರಿ ಹುದ್ದೆ ಭರ್ತಿಗೆ ಉದ್ಯೋಗಾಕಾಂಕ್ಷಿಗಳ ದಂಗೆ – ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ?

Dharwad

ಸರ್ಕಾರಿ ಹುದ್ದೆ ಭರ್ತಿಗೆ ಉದ್ಯೋಗಾಕಾಂಕ್ಷಿಗಳ ದಂಗೆ – ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ?

Public TV
Last updated: February 24, 2026 6:19 pm
Public TV
Share
2 Min Read
Students and Job Aspirants Stage Massive Protest Rally In Dharwad
SHARE

– ವಿದ್ಯಾಕಾಶಿ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ

ಧಾರವಾಡ: ಖಾಲಿ ಇರುವ 2.84 ಲಕ್ಷ ಸರ್ಕಾರಿ (Government Jobs) ಹುದ್ದೆಗಳ ಭರ್ತಿಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಇಂದು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ (Massive Protest) ನಡೆಸಿತು. ಶಿಕ್ಷಣ, ಪೊಲೀಸ್, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಂತೆ ಅಭ್ಯರ್ಥಿಗಳು(Candidates) ಆಗ್ರಹಿಸಿದರು.

ಉದ್ಯೋಗ ಬೇಕು ಎಂದು ಭಿತ್ತಿಪತ್ರ ಹಿಡಿದು ಸಾವಿರಾರು ಯವಕರು ಆಗಮಿಸಿದರು. ಈ ವೇಳೆ ಪೊಲೀಸರು-ಪ್ರತಿಭಟನಾಕಾರರ ಮಧ್ಯೆ ತಳ್ಳಾಟ-ನೂಕಾಟ ನಡೆಯಿತು. ಪ್ರತಿಭಟನೆಗೆ ಅನುಮತಿ ನಿಡಲು ಪೊಲೀಸ್ (Police) ಇಲಾಖೆಯಿಂದ ಕಿರಿಕಿರಿಯಾಗಿತ್ತು. ಎರಡನೇ ಬಾರಿಯ ಬೃಹತ್ ಪ್ರತಿಭಟನೆಗೆ ಪೊಲೀಸರು ಅಡ್ಡಿಯಾಗುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದೇ ವಿಚಾರವಾಗಿ ಉದ್ಯೋಗಾಕಾಂಕ್ಷಿಗಳು ಮತ್ತು ಪೊಲೀಸರ ನಡುವೆ ದೊಡ್ಡ ಮಾತಿನ ಚಕಮಕಿ ನಡೆಯಿತು.

 

ಉದ್ಯೋಗ ಬೇಕು ಎಂಬ ಭಿತ್ತಿಪತ್ರ ಹಿಡಿದು ಬಂದ ಯುವಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಭಾವಚಿತ್ರವನ್ನು ಸುಟ್ಟು ಹಾಕಿ ಸಿಟ್ಟು ಹೊರಹಾಕಿದರು. ಸರ್ಕಾರ ರಚನೆಯಾದರೆ ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಸರ್ಕಾರ ರಚನೆಯಾಗಿ ಎರಡೂವರೆ ವರ್ಷವಾದರೂ ಇನ್ನು ನೇಮಕ ಪ್ರಕ್ರಿಯೆ ನಡೆಸಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಕುರ್ಚಿಗೆ ಕಂಟಕ ಬಂದಾಗ ಸಿದ್ದರಾಮಯ್ಯರಿಂದ ಸಾಮಾಜಿಕ ನ್ಯಾಯ, ಜಾತಿ ಬಗ್ಗೆ ಪ್ರಸ್ತಾಪ: ಸಿ.ಟಿ ರವಿ

ವಿದ್ಯಾರ್ಥಿಗಳ ಪ್ರತಿಭಟನೆಗೆ ಬಿಜೆಪಿ ನಾಯಕರು ಸಾಥ್ ನೀಡಿದರು. ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಸರ್ಕಾರ ಈಗ ತನ್ನ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಈಗ ನೇಮಕಾತಿ ಮಾಡದೇ ಆಕಾಂಕ್ಷಿಗಳಿಗೆ ವಂಚಿಸುತ್ತಿದೆ. ಈ ಸರ್ಕಾರ ದಿವಾಳಿಯಾಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದರು.

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ ಖಾಲಿ?
ಶಾಲಾ ಶಿಕ್ಷಣ & ಸಾಕ್ಷರತೆ : 79,694
ಆರೋಗ್ಯ & ವೈದ್ಯಕೀಯ ಶಿಕ್ಷಣ: 37,572
ಒಳಾಡಳಿತ ಇಲಾಖೆ : 28,188
ಉನ್ನತ ಶಿಕ್ಷಣ: 13,599
ಪಶುಸಂಗೋಪನೆ : 11,020
ಕಂದಾಯ ಇಲಾಖೆ : 10,867
ಗ್ರಾಮೀಣಾಭಿವೃದ್ಧಿ : 10,504
ಪರಿಶಿಷ್ಟ ಜಾತಿ ಕಲ್ಯಾಣ : 9,646
ಹಿಂದುಳಿದ ವರ್ಗಗಳ ಕಲ್ಯಾಣ : 8,525
ಆರ್ಥಿಕ ಇಲಾಖೆ : 7,668
ಕಾನೂನು ಇಲಾಖೆ : 7,659
ಕೃಷಿ ಇಲಾಖೆ : 6,876
ಅರಣ್ಯ ಇಲಾಖೆ : 6,478

ಸಿಬ್ಬಂದಿ & ಆಡಳಿತ ಸುಧಾರಣೆ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ, ಸಹಕಾರ ಇಲಾಖೆ , ಮಹಿಳಾ ಮತ್ತು ಮಕ್ಕಳ ಕಲ್ಯಾಣ , ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆ, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ , ಆಹಾರ & ನಾಗರಿಕ ಇಲಾಖೆ, ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ, ಸಣ್ಣ ನೀರಾವರಿ ಸೇರಿದಂತೆ ಹಲವು ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿವೆ ಇವೆ. ಇವೆಲ್ಲವನ್ನು ಭರ್ತಿ ಮಾಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

TAGGED:Dharwadakarnatakaprotestಕರ್ನಾಟಕಧಾರವಾಡಪ್ರತಿಭಟನೆಸರ್ಕಾರಿ ಉದ್ಯೋಗ
Share This Article
Facebook Whatsapp Whatsapp Telegram

Cinema news

darshan 1
ದರ್ಶನ್ ಒಳಸಂದರ್ಶನಕ್ಕೆ ಕೋರ್ಟ್ ಅಸ್ತು – ಅಂತಿಮ ನಿರ್ಧಾರ ಜೈಲು ಅಧೀಕ್ಷಕರಿಗೆ ಬಿಟ್ಟದ್ದು ಎಂದ ನ್ಯಾಯಾಲಯ
Bengaluru City Cinema Court Districts Karnataka Latest Top Stories
Nora Fatehi
ʻಸರ್ಸೆ ಸರ್ಸೆ ಸೆರಗ ಸರ್ಸೆʼ ಹಾಡಿನ ವಿವಾದ – ಮಹಿಳಾ ಆಯೋಗದಿಂದ ಫಿಲ್ಮ್ ಚೇಂಬರ್‌ಗೆ ಪತ್ರ
Bollywood Cinema Latest Sandalwood Top Stories
Salman Khan
ಸಲ್ಮಾನ್ ಖಾನ್ ಅಭಿನಯದ `ಬ್ಯಾಟಲ್ ಆಫ್ ಗಲ್ವಾನ್’ ಈಗ `ಮಾತೃಭೂಮಿ’
Bollywood Cinema Latest Top Stories
Oscars 2026 Michael B Jordan Jessie Buckley
Oscars 2026: ಮೈಕೆಲ್ ಬಿ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ
Cinema Latest Top Stories World

You Might Also Like

Accident between two Thar cars on the highway Chikkaballapura
Chikkaballapur

ಹೈವೇಯಲ್ಲಿ ಎರಡು ಥಾರ್ ಕಾರುಗಳ ಮಧ್ಯೆ ಅಪಘಾತ

Public TV
By Public TV
1 minute ago
Srirama pattabhisheka
Latest

ಯುಗಾದಿ ವಿಶೇಷ | ಶ್ರೀರಾಮನ ಪಟ್ಟಾಭಿಷೇಕ – ಕೆಡುಕಿಂದ ಒಳಿತಿನೆಡೆ ನಡೆವ ಸಂಕೇತ

Public TV
By Public TV
3 minutes ago
Weather 1
Bengaluru City

ಬೆಂಗಳೂರಿನಲ್ಲಿ ಮೊದಲ ವರ್ಷಧಾರೆ – ಮುಂದಿನ 4 ದಿನ ರಾಜ್ಯಾದ್ಯಂತ ಮಳೆ

Public TV
By Public TV
34 minutes ago
Bengaluru IIM passout Sofia Firdous is Odisha first Muslim woman MLA 2
Bengaluru City

ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ – ಒಡಿಶಾ ಕಾಂಗ್ರೆಸ್ಸಿನ ಮೊದಲ ಮುಸ್ಲಿಮ್‌ ಶಾಸಕಿ ಪಕ್ಷದಿಂದಲೇ ಉಚ್ಚಾಟನೆ

Public TV
By Public TV
1 hour ago
Davanagere Byelection
Davanagere

ದಾವಣಗೆರೆ ದಕ್ಷಿಣ ಉಪಚುನಾವಣೆ | ಕಾಂಗ್ರೆಸ್‌ ಸಭೆಯಲ್ಲಿ ಗದ್ದಲ – ಬೇಸರದಿಂದ ಹೊರನಡೆದ ಉಸ್ತುವಾರಿ ಸಮಿತಿ ಸದಸ್ಯರು

Public TV
By Public TV
2 hours ago
Bidar LPG Cylinder
Bidar

ಕಾಳಸಂತೆಯಲ್ಲಿ ಮಾರಾಟ ಮಾಡೋಕೆ ಸಂಗ್ರಹಿಸಿದ್ದ 105 ಗ್ಯಾಸ್ ಸಿಲಿಂಡರ್ ಜಪ್ತಿ – ನಾಲ್ವರು ಅರೆಸ್ಟ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?