ಚಂಡೀಗಢ್: ಬಳಸಿದ ಸ್ಯಾನಿಟರಿ ಪ್ಯಾಡ್ ಶೌಚಾಲಯದಲ್ಲಿ ಹಾಕಿದ್ದಕ್ಕೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಆರೋಪದ ಮೇರೆಗೆ ಇಬ್ಬರು ವಾರ್ಡನ್ ಗಳನ್ನು ವಜಾ ಮಾಡಲಾಗಿದೆ.
ಪಂಜಾಬಿನ ಬಟಿಂಡಾ ವಿಶ್ವವಿದ್ಯಾಲಯದ ಮಹಿಳಾ ಹಾಸ್ಟೇಲಿನ ಟಾಯ್ಲೆಟಿನಲ್ಲಿ ಸ್ಯಾನಿಟರಿ ಪ್ಯಾಡ್ ಯಾರೂ ಹಾಕಿದ್ದಾರೆ ಎನ್ನುವುದನ್ನು ಪರಿಶೀಲಿಸಲು ವಾರ್ಡನ್ 12 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದರು. ಇದನ್ನು ವಿರೋಧಿಸಿ 600ರಿಂದ 700 ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ವಿದ್ಯಾರ್ಥಿನಿಯರು ಪ್ರತಿಭಟನೆಗೆ ಮಣಿದ ವಿವಿಯ ಆಡಳಿತ ಮಂಡಳಿ ಇಬ್ಬರು ವಾರ್ಡನ್‍ಗಳನ್ನು ಕೆಲಸದಿಂದ ವಜಾ ಮಾಡಿದೆ.
Advertisement
Advertisement
ಮೊದಲು ಈ ಘಟನೆಯನ್ನು ಆಡಳಿತ ಮಂಡಳಿ ಅಷ್ಟು ಗಂಭಿರವಾಗಿ ತೆಗೆದುಕೊಂಡಿರಲ್ಲ. ಆದರೆ ವಿದ್ಯಾರ್ಥಿನಿಯರ ಪ್ರತಿಭಟನೆ ಜೋರಾಗುತ್ತಿದ್ದಂತೆ ಎಚ್ಚೆತ್ತ ಆಡಳಿತ ಮಂಡಳಿ ಇಬ್ಬರು ಸೆಕ್ಯೂರಿಟಿ ಗಾರ್ಡ್ ಹಾಗೂ ಇಬ್ಬರು ವಾರ್ಡನ್ ಗಳನ್ನು ಕೆಲಸದಿಂದ ಕಿತ್ತು ಹಾಕಿದೆ.
Advertisement
ವಾರ್ಡನ್ ನಮಗೆ ಹಾಸ್ಟೆಲ್‍ನಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಅವರು ನಮಗೆ ಹುಡುಗರ ಜೊತೆ ಮಾತನಾಡುವುದಕ್ಕೂ ಬಿಡುವುದಿಲ್ಲ. ಈಗ ಅವರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಮುಜುಗರ ಆಗುವಂತೆ ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿ ಆಗ್ರಹಿಸಿದ್ದರು.